ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಉಡುಪಿ: ಆರು ಮಕ್ಕಳ ಚಿಕಿತ್ಸೆಗೆ 14.35 ಲಕ್ಷ ರೂ. ಹಸ್ತಾಂತರಿಸಿದ ವೇಷಧಾರಿ ರವಿ ಕಟಪಾಡಿ!

ಉಡುಪಿ: ಅಷ್ಟಮಿಯಂದು ವಿಶಿಷ್ಟ ವೇಷ ಹಾಕಿ, ಅದರಿಂದ ಲಕ್ಷಾಂತರ ರೂ ಹಣ ಸಂಗ್ರಹಿಸಿದ್ದ ವೇಷಧಾರಿ ರವಿ ಕಟಪಾಡಿ ಇವತ್ತು ಸಂಗ್ರಹವಾದ ಹಣವನ್ನು ಹಸ್ತಾಂತರಿಸಿದರು. ಆರು ಮಕ್ಕಳ ಚಿಕಿತ್ಸೆಗೆ ಈ ಹಣ ವಿನಿಯೋಗವಾಗಲಿದೆ. ಸುಮಾರು 14.35 ಲಕ್ಷ ರೂ. ಹಣವನ್ನು 6 ಮಕ್ಕಳ ವೈದ್ಯಕೀಯ ಚಿಕಿತ್ಸೆಗಾಗಿ ಹಸ್ತಾಂತರಿಸುವ ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ ಕೂರ್ಮಾ ರಾವ್ ಉಪಸ್ಥಿತರಿದ್ದರು.

ಇದಕ್ಕೂ ಮುನ್ನ ಕಟಪಾಡಿ ಪೇಟೆಬೆಟ್ಟು ಬಬ್ಬು ಸ್ವಾಮಿ ದೈವಸ್ಥಾನ ಹಾಗೂ ಕೊರಗ ಸನ್ನಿಧಾನದಲ್ಲಿ ಪ್ರಾರ್ಥನೆ ನಡೆಯಿತು. ಕಳೆದ ಏಳು ವರ್ಷಗಳಿಂದ ಕೃಷ್ಣ ಜನ್ಮಾಷ್ಟಮಿಯಂದು ಕಲಾವಿದ ರವಿ ಕಟಪಾಡಿ ವಿವಿಧ ವೇಷ ಧರಿಸಿ ಒಟ್ಟು 89.75 ಲಕ್ಷ ರೂ. ಹಣ ಸಂಗ್ರಹಿಸಿ ಅನಾರೋಗ್ಯ ಪೀಡಿತರಿಗೆ ನೀಡಿದ್ದರು. ಈ ಬಾರಿ 14 ಲಕ್ಷ ರೂ. ನೀಡುವುದರೊಂದಿಗೆ ಅವರು ಈತನಕ ಒಂದು ಕೋಟಿಗೂ ಅಧಿಕ ಹಣವನ್ನು ಚಿಕಿತ್ಸೆಗೆ ನೀಡಿದಂತಾಗಿದೆ.

Edited By : Nagaraj Tulugeri
Kshetra Samachara

Kshetra Samachara

30/08/2022 10:00 pm

Cinque Terre

3.9 K

Cinque Terre

3

ಸಂಬಂಧಿತ ಸುದ್ದಿ