ಉಡುಪಿ: ಇಂದ್ರಾಣಿ ರೈಲ್ವೆ ಪೋಲಿಸ್ ಠಾಣೆಯ ವತಿಯಿಂದ ಸಮಾಜಸೇವಕ ನಿತ್ಯಾನಂದ ಒಳಕಾಡು ಅವರನ್ನು ಸ್ವಾತಂತ್ರ್ಯ ಅಮೃತ ಮಹೋತ್ಸವ ಸಂದರ್ಭದಲ್ಲಿ ಸನ್ಮಾನಿಸಲಾಯಿತು. ಈ ಸಂದರ್ಭದಲ್ಲಿ ರೈಲ್ವೆ ಇನ್ಸ್ಪೆಕ್ಟರ್ ಪಿ ವಿ. ಮಧುಸೂದನ್ ಎಸ್.ಆರ್. ಸ್ಟೇಷನ್ ಮಾಸ್ಟರ್ ವಿನೋದ್, ಮಹಿಳಾ ಸಿಬ್ಬಂದಿ ಜೀನಾ ಪಿಂಟೋ ಉಪಸ್ಥಿತರಿದ್ದರು.
ನಿತ್ಯಾನಂದರು ರೈಲ್ವೆ ನಿಲ್ದಾಣದಲ್ಲಿ ಅಸಹಾಯಕ ಸ್ಥಿತಿಯಲ್ಲಿರುವ ವ್ಯಕ್ತಿಗಳ ರಕ್ಷಣೆ ಹಾಗೂ ರೈಲು ಅಪಘಾತ, ಆತ್ಮಹತ್ಯೆ ಮೊದಲಾದ ಕಾರಣಗಳಿಂದ ಮೃತಪಟ್ಟಿರುವ ಕಳೇಬರಗಳನ್ನು ತೆರವುಗೊಳಿಸುವಲ್ಲಿ ಇಲಾಖೆಗೆ ಸಹಕರಿಸುತ್ತಿದ್ದರು.
Kshetra Samachara
16/08/2022 05:57 pm