ಉಡುಪಿ: ಮನೆಯ ಹೆಂಚಿನ ಮಾಡಿನಲ್ಲಿ ಸಿಲುಕಿದ್ದ ಮೂರು ಅಡಿ ಉದ್ದದ ನಾಗರ ಹಾವನ್ನು ರಕ್ಷಿಸಲಾಗಿದೆ. ಉರಗತಜ್ಞ ಗುರುರಾಜ್ ಸನಿಲ್ ನಾಗರ ಹಾವನ್ನು ರಕ್ಷಿಸುವ ಮೂಲಕ ಮನೆಯವರ ಆತಂಕ ದೂರಮಾಡಿದ್ದಾರೆ. ಉಡುಪಿಯಲ್ಲಿ ಹೆಂಚಿನ ಮನೆಯ ಮಾಡಿನ ನಡುವೆ ಇಲಿಗಳ ವಾಸನೆ ಅರಸಿ ಬಂದ ಹಾವು ಸಿಲುಕಿತ್ತು, ಈ ಹಾವಿನ ಇರುವಿಕೆ ಗಮನಿಸಿದ ಮನೆಯವರು ಕೂಡಲೇ ಉರಗತಜ್ಞ ಗುರುರಾಜ್ ಸನಿಲ್ ಅವರನ್ನು ಕರೆಸಿ ಹಾವನ್ನ ರಕ್ಷಿಸಿಸಿದ್ದಾರೆ. ನಂತರ ಹಾವನ್ನ ಸುರಕ್ಷಿತವಾಗಿ ಕಾಡಿಗೆ ರವಾನಿಸಲಾಯಿತು.
Kshetra Samachara
15/08/2022 05:30 pm