ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬ್ರಹ್ಮಾವರ: ಸ್ವಾತಂತ್ರ್ಯೋತ್ಸವ ಅಮೃತ ಮಹೋತ್ಸವ : ಗಮನಸೆಳೆದ ಶ್ರಮ ಜೀವಿ

ಬ್ರಹ್ಮಾವರ: ಬ್ರಹ್ಮಾವರ ರಾಷ್ಟ್ರೀಯ ಹೆದ್ದಾರಿ 66 ಉಪ್ಪಿನ ಕೋಟೆ ಬಳಿಯ ಶ್ರೀ ದುರ್ಗಾಪರಮೇಶ್ವರೀ ಇಂಜಿನಿಯರಿಂಗ್ ವರ್ಕ್ ನ ಶಂಕರ ಪೂಜಾರಿಯವರು ಹಳೆ ದ್ವಿಚಕ್ರವಾಹನದ ಬಿಡಿಭಾಗವನ್ನು ಬಳಸಿ ದೇಶದ ಯುದ್ಧ ಟ್ಯಾಂಕರ್ ಒಂದರ ಮಾದರಿಯೊಂದನ್ನು ತಯಾರಿಸಿ ಗಮನ ಸೆಳೆದಿದ್ದಾರೆ.

ಹೌದು 1.5 ಅಡಿ ಉದ್ದ , 7 ಇಂಚು ಅಗಲ , 16 ಇಂಚು ಎತ್ತರದ 10 ಕೆಜಿ ಭಾರದಲ್ಲಿ ಇವರದೆ ಕಲ್ಪನೆಯಲ್ಲಿ ದೇಶದ ಯುದ್ಧ ಟ್ಯಾಂಕರ್ ಪಡಿಮೂಡಿದೆ.

ಹಳೆ ವಾಹನದ ಚೈನ್, ರೋಲ್ ಇನ್ನಿತರ ವಸ್ತುವನ್ನು ಬಳಸಿ ಮಾಡಲಾದ ಚಲಿಸುವ ಯುದ್ಧ ಟ್ಯಾಂಕರ್ಗೆ ಇವರ ಇನ್ನೊಬ್ಬ ಮಿತ್ರ ಕಿರಣ್ ಪೂಜಾರಿ ಸೈನಿಕರ ಸಮವಸ್ತ್ರದ ತದ್ರೂಪಿ ಬಣ್ಣದ ಮೆರಗು ನೀಡಿದ್ದಾರೆ.

ಹಾಗೆಯೇ ಪಕ್ಕದ ಅಂಗಡಿಯ ಉದಯ ಕುಮಾರ್ ಮತ್ತು ಉಪೇಂದ್ರ ಪ್ರಭುಗಳು ಇವರ ದೇಶಪ್ರೇಮಕ್ಕೆ ಉತ್ತೇಜನ ನೀಡಿ, ಸಾರ್ವಜನಿಕವಾಗಿ ತೆರೆದಿಟ್ಟು ಹರ್ ಘರ್ ತಿರಂಗಕ್ಕೆ ಚಾಲನೆ ನೀಡಿದ್ದಾರೆ. ನಾಲ್ಕಾರು ದಿನದಿಂದ ಅಪಾರ ಶ್ರಮ ವಹಿಸಿ ಮಾಡಲಾದ ಈ ಯುದ್ಧ ಟ್ಯಾಂಕರ್ ಇವರ ಶ್ರಮದ ದುಡಿಮೆಯ ನಡುವೆ ಕಲೆಯೊಂದು ಅರಳಿ ದೇಶದ ಸ್ವಾತಂತ್ರ್ಯೋತ್ಸವದ ಅಮೃತಮಹೋತ್ಸವಕ್ಕೆ ಕೊಡುಗೆಯಾಗಿ ನೀಡಿದ್ದಾರೆ.

Edited By : Manjunath H D
PublicNext

PublicNext

14/08/2022 12:11 pm

Cinque Terre

32.95 K

Cinque Terre

1