ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಸುಳ್ಯ: ನೆರೆಯಲ್ಲಿ ಕೊಚ್ಚಿ ಹೋದ ಶ್ವಾನಗಳು ಬದುಕಿ ಬಂದು ಯಜಮಾನನ ಮಡಿಲು ಸೇರಿದ ಕಥೆ!

ಸುಳ್ಯ: ಪ್ರಕೃತಿ ವಿಕೋಪದಿಂದ ಮನೆ ಸೇರಿ ಎಲ್ಲಾ ನಷ್ಟವಾದ ಸುಳ್ಯ ತಾಲೂಕಿನ ಕೊಲ್ಲಮೊಗ್ರದ ಕುಟುಂಬವೊಂದು ದುಃಖದಲ್ಲಿ ದಿನ ಕಳೆಯುತ್ತಿತ್ತು. ಆಗ ಬಂದ ಅದೊಂದು ದೂರವಾಣಿ ಕರೆಯಿಂದ ಮನೆಯವರ ಮುಖದಲ್ಲಿ ಸಂತಸ ಮೂಡಿದ ಕ್ಷಣದ ಕಥೆ ಇದು.

ಆಗಸ್ಟ್ 1 ರಂದು ರಾತ್ರಿಯಿಡೀ ಸುರಿದ ರಣಭೀಕರ ಮಳೆಗೆ ಕೊಲ್ಲಮೊಗ್ರದಲ್ಲಿ ಹರಿಯುತ್ತಿರುವ ಹೊಳೆಯು ಇಡೀ ಗ್ರಾಮವನ್ನೆ ಆವರಿಸಿ ಅನೇಕ ಮನೆಗಳಿಗೆ ನೆರೆ ನೀರು ನುಗ್ಗಿ ಬಹಳಷ್ಟು ಅವಾಂತರಗಳು ಸೃಷ್ಟಿಯಾಗಿತ್ತು. ಕೊಲ್ಲಮೋಗ್ರದ ದೋಲನ ಮನೆ ನಿವಾಸಿ ಲಲಿತಾ ಅವರು ತನ್ನ ಮನೆಗೆ ನೆರೆ ನೀರು ನುಗ್ಗುತ್ತಿದ್ದಂತೆ ಪಕ್ಕದ ಮನೆಯಲ್ಲಿ ಆಶ್ರಯ ಪಡೆದರು. ಅವರ ಪುತ್ರ ಹೇಮಂತ್‌ರವರು ಕುಕ್ಕೆ ಸುಬ್ರಹ್ಮಣ್ಯಕ್ಕೆ ಬಂದವರು ಮನೆಗೆ ಹಿಂದಿರುಗುತ್ತಿದ್ದಾಗ ಹರಿಹರ ಹೊಳೆಯಲ್ಲಿ ಬಹಳಷ್ಟು ನೀರು ಏರಿಕೆ ಆಗಿದ್ದರಿಂದ ಹರಿಹರ-ಕೊಲ್ಲಮೊಗ್ರ ಸಂಪರ್ಕ ರಸ್ತೆ ಬ್ಲಾಕ್ ಆಗಿತ್ತು. ಮನೆಗೆ ತಲುಪಲಾಗದೆ ಇವರು ಮರುದಿನ ನೀರು ಇಳಿಮುಖಗೊಂಡ ನಂತರ ಮನೆಗೆ ತೆರಳಿದರು. ಈ ವೇಳೆ ಅವರಿಗೆ ಅಲ್ಲಿ ಬಹಳಷ್ಟು ಆಘಾತ ಕಾದಿತ್ತು.

ನೆರೆ ನೀರು ಇಡೀ ಮನೆಯನ್ನು ಆವರಿಸಿದ ಪರಿಣಾಮ ಅವರ ಮನೆಯು ಸಂಪೂರ್ಣ ಕುಸಿದಿತ್ತು. ಮನೆಯಲ್ಲಿದ್ದ ಅನೇಕ ವಸ್ತುಗಳು ನೆರೆ ನೀರಿನ ಪಾಲಾಗಿತ್ತು. ತನ್ನ ಹಸುವೊಂದು ನೆರೆ ನೀರಿನಲ್ಲಿ ಮುಳುಗಿ ಮೃತಪಟ್ಟಿತ್ತು. ಇಷ್ಟು ಮಾತ್ರವಲ್ಲದೇ ತಾನು ಮುದ್ದಾಗಿ ಸಾಕಿದ ರಾಜು ಮತ್ತು ರಾಣಿ ಎಂಬ ಹೆಸರಿನ ಪಮೋರಿಯನ್ ಶ್ವಾನಗಳು ಭೀಕರ ನೆರೆ ನೀರಿನಲ್ಲಿ ರಾತ್ರಿ ಕೊಚ್ಚಿಕೊಂಡು ಹೋಗಿದ್ದವು. ಎಲ್ಲಾ ಕಳೆದುಕೊಂಡ ಹೇಮಂತ್ ಮತ್ತು ತಾಯಿಗೆ ಎರಡು ದಿನಗಳ ಬಳಿಕ ದುಃಖದ ನಡುವೆ ಸಂತಸ ಕ್ಷಣ ಒಂದು ಎದುರಾಯಿತು. ಅದೇನಂದರೆ ನೆರೆಯಲ್ಲಿ ಕೊಚ್ಚಿ ಹೋಗಿದ್ದ ತಮ್ಮ ರಾಜು-ರಾಣಿ ಎಂಬ ಶ್ವಾನಗಳು ಬದುಕಿವೆ ಎಂಬ ದೂರವಾಣಿ ಕರೆ. ಸುಮಾರು 2.5ಕಿ.ಮೀ.ದೂರದ ಚಾಂತಳ ಎಂಬಲ್ಲಿ ಒಂದು ಶ್ವಾನ ಪತ್ತೆಯಾದರೆ, ಎರಡು ದಿನಗಳ ಬಳಿಕ ಮತ್ತೊಂದು ಶ್ವಾನ ಅಲ್ಲಿಂದ ಸ್ವಲ್ಪ ದೂರದಲ್ಲಿ ಪತ್ತೆಯಾಗಿದೆ. ತಾವು ಮುದ್ದಾಗಿ ಸಾಕಿದ ಶ್ವಾನಗಳು ಸಿಕ್ಕಿದಾಗ ಮನೆ, ಹಸು, ಮನೆಯಲ್ಲಿದ್ದ ವಸ್ತುಗಳು ಎಲ್ಲಾ ಕಳೆದುಕೊಂಡು ದುಃಖದಲ್ಲಿದ್ದ ನಡುವೆಯೂ ಮನೆಯವರ

ಮುಖದಲ್ಲಿ ಸಂತೋಷ ಕಂಡು ಬಂತು. ಶ್ವಾನಗಳನ್ನು ಪತ್ತೆ ಹಚ್ಚುವಲ್ಲಿ ಸಹಕರಿಸಿದ ಎಲ್ಲರನ್ನೂ ಹೇಮಂತ್ ಅವರು ಕೃತಜ್ಞತೆಯಿಂದ ಸ್ಮರಿಸಿದರು.

Edited By :
PublicNext

PublicNext

06/08/2022 01:46 pm

Cinque Terre

38.83 K

Cinque Terre

2

ಸಂಬಂಧಿತ ಸುದ್ದಿ