ಮಲ್ಪೆ: ಉಡುಪಿಯ ಟ್ಯುಟೋರಿಯಲ್ ಒಂದರಲ್ಲಿ ಪಿಯುಸಿ ಓದುತ್ತಿದ್ದ ತೆಂಕನಿಡಿಯೂರು ಲಕ್ಷ್ಮೀನಗರ ನಿವಾಸಿ ರವಿ ಕುಲಾಲ್ ಹಾಗೂ ಶರ್ಮಿಳಾ ದಂಪತಿ ಮಗ ಸೃಜನ್(17) ಎಂಬವರು ಆ.4ರಂದು ಬೆಳಗ್ಗೆ ಮನೆಯಿಂದ ಹೋದವನು ಮನೆಗೆ ವಾಪಾಸು ಬಾರದೆ ನಾಪತ್ತೆಯಾಗಿದ್ದಾನೆ.
ಸೃಜನ್ ಈ ಹಿಂದೆ ಎರಡು ಬಾರಿ ಮನೆ ಬಿಟ್ಟು ಹೋದವನು ಮರುದಿನ ವಾಪಸು ಬಂದಿದ್ದಾನೆ. ಈತ ಮನೆಯಿಂದ ಹೋಗುವಾಗ ಕ್ರೀಮ್ ಕಲರ್ ಪ್ಯಾಂಟ್ ಮತ್ತು ಕಾಫಿ ಬಣ್ಣದ ಹೂಗಳಿರುವ ಉದ್ಧತೋಳಿನ ಶರ್ಟ್ ಧರಿಸಿದ್ದ. ಈ ಬಗ್ಗೆ ಮಲ್ಪೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Kshetra Samachara
06/08/2022 01:07 pm