ಮಣಿಪಾಲ: ಮಣಿಪಾಲದ ಶಿಲ್ಪಿ ಡಾ.ಟಿಎಂಎ ಪೈ ಅವರ ಹಿರಿಯ ಪುತ್ರ ಹಾಗೂ ಉದಯವಾಣಿ ಸಂಸ್ಥಾಪಕ ಟಿ. ಮೋಹನ ದಾಸ್ ಎಂ. ಪೈ (89) ಅವರು ನಿನ್ನೆ ರಾತ್ರಿ ನಿಧನರಾಗಿದ್ದು, ಅವರ ಅಂತಿಮ ದರ್ಶನಕ್ಕೆ ಎಂಜಿಎಂ ಕಾಲೇಜಿನ ರವೀಂದ್ರ ಕಲಾ ಮಂಟಪದಲ್ಲಿ ವ್ಯವಸ್ಥೆ ಮಾಡಲಾಗಿದೆ. ಸಚಿವರಾದ ಅಂಗಾರ, ಸುನಿಲ್ ಕುಮಾರ್, ಮಾಜಿ ಸಚಿವ ವಿನಯ ಕುಮಾರ್ ಸೊರಕೆ ಸಹಿತ ಹಲವು ಗಣ್ಯರು ಅಂತಿಮ ದರ್ಶನ ಪಡೆದರು.
ದಿವಂಗತರು ಡಾ.ಟಿಎಂಎ ಪೈ ಫೌಂಡೇಶನ್, ಎಂಜಿಎಂ ಕಾಲೇಜ್ ಟ್ರಸ್ಟ್‌ನ ಅಧ್ಯಕ್ಷರಾಗಿದ್ದರು. ಅವರು ತಮ್ಮಂದಿರಾದ ಡಾ.ಟಿ.ರಾಮದಾಸ್ ಪೈ, ಟಿ.ನಾರಾಯಣ ಪೈ, ಟಿ.ಅಶೋಕ್ ಪೈ, ತಂಗಿಯರಾದ ವಸಂತಿ ಆರ್. ಶೆಣೈ, ಜಯಂತಿ ಪೈ,
ಇಂದುಮತಿ ಪೈ, ಆಶಾ ಪೈ, ಸಹೋದರ ಟಿ.ಸತೀಶ್ ಯು. ಪೈ ಅವರನ್ನು ಅಗಲಿದ್ದಾರೆ.
ಟಿ. ಮೋಹನ್ ದಾಸ್ ಪೈ ಅವರ ನಿಧನ ಹಿನ್ನೆಲೆಯಲ್ಲಿ ಇಂದು ಡಾ.ಟಿಎಂಎ ಪೈ ಫೌಂಡೇಶನ್‌ನ ವಿದ್ಯಾಸಂಸ್ಥೆಗಳಿಗೆ ರಜೆ ಘೋಷಣೆ ಮಾಡಲಾಗಿದೆ.
Kshetra Samachara
01/08/2022 06:10 pm