ಮಣಿಪಾಲ: ಮಣಿಪಾಲದ ಟಿ. ಮೋಹನ್ ದಾಸ್ ಎಂ ಪೈ(89) ನಿಧನರಾಗಿದ್ದಾರೆ.ಇವರು ಮಣಿಪಾಲದ ಶಿಲ್ಪಿ ಡಾ. ಟಿ ಎಮ್ ಎ ಪೈ ಅವರ ಹಿರಿಯ ಪುತ್ರ. ಇಂದು ಸಂಜೆ ಮಣಿಪಾಲದ ಕೆ ಎಂ ಸಿ ಆಸ್ಪತ್ರೆಯಲ್ಲಿ ನಿಧನರಾದ ಮೋಹನ್ ದಾಸ್ ಪೈ ,ಡಾ ಟಿ ಎಂ ಎ ಪೈ ಫೌಂಡೇಶನ್ ಮತ್ತು ಎಂಜಿಎಂ ಕಾಲೇಜ್ ಟ್ರಸ್ಟ್ ನ ಅಧ್ಯಕ್ಷರಾಗಿದ್ದರು.
ನಾಳೆ ಎಂಜಿಎಂ ಕಾಲೇಜಿನಲ್ಲಿ ಮೃತರ ಅಂತಿಮ ದರ್ಶನ ನಡೆಯಲಿದೆ.ನಿಧನ ಹಿನ್ನೆಲೆಯಲ್ಲಿ ನಾಳೆ ಡಾ ಟಿ ಎಂ ಎ ಪೈ ಫೌಂಡೇಶನ್ ನ ವಿದ್ಯಾಸಂಸ್ಥೆಗಳಿಗೆ ರಜೆ ಘೋಷಣೆ ಮಾಡಲಾಗಿದೆ.
Kshetra Samachara
31/07/2022 09:28 pm