ಉಡುಪಿ: ಕಲ್ಸಂಕದ ನಿರ್ಮಾಣ ಹಂತದ ಬಹುಮಹಡಿ ಕಟ್ಟಡದ ತಳ ಅಂತಸ್ಥಿನಲ್ಲಿದ್ದ ನೀರಿನ ಹೊಂಡಕ್ಕೆ ವ್ಯಕ್ತಿಯೊಬ್ಬರು ಬಿದ್ದ ಘಟನೆ ಸಂಭವಿಸಿದೆ. ತಕ್ಷಣ ಸಮಾಜ ಸೇವಕ ನಿತ್ಯಾನಂದ ಒಳಕಾಡು ಸ್ಥಳೀಯ ಆಟೋ ಚಾಲಕರ ಸಹಕಾರದಿಂದ ರಕ್ಷಿಸಿ ಅಜ್ಜರಕಾಡು ಜಿಲ್ಲಾಸ್ಪತ್ರೆಗೆ ದಾಖಲಿಸಿದ್ದಾರೆ.
ನೀರಿನ ಗುಂಡಿಗೆ ಬಿದ್ದ ವ್ಯಕ್ತಿಯನ್ನು ಬಾಗಲಕೋಟೆ ಮೂಲದ ಕಾರ್ಮಿಕ ಅಪ್ಪಾಚಿ (32) ಎಂದು ಗುರುತಿಲಾಗಿದೆ. ರಕ್ಷಿಸಲ್ಪಟ್ಟ ಯುವಕನ ಸಂಬಂಧಿಕರು ಜಿಲ್ಲಾಸ್ಪತ್ರೆಯನ್ನು ಸಂಪರ್ಕಿಸಲು ಸೂಚಿಸಲಾಗಿದೆ.
Kshetra Samachara
25/07/2022 01:26 pm