ಹೆಬ್ರಿ : ಹೆಬ್ರಿ ಮೂಲದ ರಾಜ್ಯ ಮಟ್ಟದ ಕಬಡ್ಡಿ ಆಟಗಾರ ಸುಶಾಂತ್ ಶೆಟ್ಟಿ (32) ಮಣಿಪಾಲ ಆಸ್ಪತ್ರೆಯಲ್ಲಿ ನಿಧನ ಹೊಂದಿದ್ದಾರೆ.
ಉಡುಪಿಯ ಜ್ಯುವೆಲ್ಲರಿ ಮಳಿಗೆಯೊಂದರಲ್ಲಿ ಉದ್ಯೋಗ ಮಾಡಿಕೊಂಡದ್ದ ಸುಶಾಂತ್ ಶೆಟ್ಟಿ, ಅವರಿಗೆ ಕೆಲ ದಿನಗಳ ಹಿಂದೆ ಜ್ವರ ಕಾಣಿಸಿಕೊಂಡಿತ್ತು. ಜ್ವರ ತೀವ್ರಗೊಂಡ ಕಾರಣ ಶುಕ್ರವಾರ ಮಣಿಪಾಲ ಆಸ್ಪತ್ರೆಗೆ ಸುಶಾಂತ್ ದಾಖಲಾಗಿದ್ದರು.ವಿಪರೀತ ಜ್ವರದ ಕಾರಣ ಕಿಡ್ನಿ ಮತ್ತು ಲಿವರ್‌ನ ಮೇಲೆ ವ್ಯತಿರಿಕ್ತ ಪರಿಣಾಮ ಬೀರಿ, ಚಿಕಿತ್ಸೆ ಫಲಕಾರಿಯಾಗದೇ ಸುಶಾಂತ್ ಕೊನೆಯುಸಿರೆಳೆದಿದ್ದಾರೆ. ಮೃತರು ತಂದೆ ಗುಣಕರ್ ಶೆಟ್ಟಿ, ತಾಯಿ, ಸಹೋದರ ಸುದೀಪ್, ಸಹೋದರಿ ಚಿತ್ರಾ, ಪತ್ನಿ ಅಶ್ವಿತಾ ಹಾಗೂ ಪುತ್ರನನ್ನು ಅಗಲಿದ್ದಾರೆ.
Kshetra Samachara
23/07/2022 06:21 pm