ಉಡುಪಿ: ತಿಂಗಳ ಹಿಂದೆ ಸೊಂಟ ಹಾಗೂ ಕಾಲಿನ ಎಲುಬಿಗೆ ಪೆಟ್ಟಾಗಿ ಚಿಕಿತ್ಸೆ ಪಡೆದು ಜಿಲ್ಲಾಸ್ಪತ್ರೆಯಿಂದ ಬಿಡುಗಡೆಗೊಂಡರೂ, ತನ್ನವರು ಯಾರೂ ಇಲ್ಲದೆ ಅಸಹಾಯಕರಾಗಿ ನೆರವು ನಿರೀಕ್ಷಿಸುತ್ತಿದ್ದ ರಾಣೆಬೆನ್ನೂರಿನ ನಾಗರಾಜ್ ಕೊನೆಗೂ ತಮ್ಮ ಕುಟುಂಬವನ್ನು ಸೇರಿಕೊಂಡಿದ್ದಾರೆ. ಸಮಾಜ ಸೇವಕ ವಿಶು ಶೆಟ್ಟಿ ಅವರ ಮಾನವೀಯತೆಯಿಂದ ಇದು ಸಾಧ್ಯವಾಗಿದೆ.
ನಾಗರಾಜ್ ಉಡುಪಿಯಲ್ಲಿ ಕೂಲಿ ಕಾರ್ಮಿಕರಾಗಿದುಡಿಯುತ್ತಿದ್ದರು. ಕೆಲಸಮಯದ ಹಿಂದೆ ಜಾರಿ ಬಿದ್ದು ಸೊಂಟ ಹಾಗೂ ಕಾಲಿಗೆ ಗಂಭೀರ ಏಟಾಗಿತ್ತು. ಉಡುಪಿ ಅಜ್ಜರಕಾಡು ಜಿಲ್ಲಾಸ್ಪತ್ರೆಯಲ್ಲಿ ಒಂದು ತಿಂಗಳ ಕಾಲ ಚಿಕಿತ್ಸೆ ಪಡೆದರೂ ನಡೆದಾಡಲು ಊರುಗೋಲನ್ನುಆಶ್ರಯಿಸಬೇಕಾದ ಅನಿವಾರ್ಯತೆಯಿತ್ತು.ತನ್ನವರು ಯಾರೂ ಇರಲಿಲ್ಲ. ಜೊತೆಗೆ ಜೇಬಲ್ಲಿ ಚಿಕ್ಕಾಸೂ ಇಲ್ಲದೆ ಅವರು ತೀರಾ ಅಸಹಾಯಕ ಸ್ಥಿತಿಗೆ ತಲುಪಿದ್ದರು.ಕೊನೆಗೆ ವಿಶು ಶೆಟ್ಟಿ ಇವರ ನೆರವಿಗೆ ಧಾವಿಸಿದ್ದರು.
ವೃದ್ಧರ ನೆರವಿಗೆ ಕೂಡಲೇ ಸ್ಪಂದಿಸಿದ ವಿಶು ಶೆಟ್ಟಿ ಅವರು ನಾಗರಾಜ್ ಅವರನ್ನು ಆಸ್ಪತ್ರೆಯಿಂದ ಕರೆದುಕೊಂಡು ಹೋಗಿ ರಾಣೆಬೆನ್ನೂರಿಗೆ ಬಸ್ ಹತ್ತಿಸಿದ್ದಾರೆ. ಬಸ್ ಟಿಕೇಟು ಹಾಗೂ ಖರ್ಚಿಗೆ ಹಣವನ್ನು ನೀಡಿ ಮಾನವೀಯತೆ ಮೆರೆದಿದ್ದಾರೆ.ವಿಶು ಶೆಟ್ಟಿ ಅವರ ಮಾನವೀಯ ನೆರವಿಗೆ ನಾಗರಾಜ್ ಕುಟುಂಬ ಪ್ರಶಂಸೆ ವ್ಯಕ್ತಪಡಿಸಿದೆ.
Kshetra Samachara
15/07/2022 07:17 pm