ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬ್ರಹ್ಮಾವರ: ಚಾಂತಾರು ಗ್ರಾ.ಪಂ ಮಾಜಿ ಸದಸ್ಯ ಉಮೇಶ್ ಶೆಟ್ಟಿ ನಿಧನ

ಬ್ರಹ್ಮಾವರ: ಹೇರೂರು ಬಡಾಮನೆ ದಿ.ಕೃಷ್ಣಯ್ಯ ಶೆಟ್ಟಿ ಎಂಬುವರ ಪುತ್ರ,ಮಾಜಿ ಗ್ರಾಪಂ ಸದಸ್ಯ ಉಮೇಶ್ ಶೆಟ್ಟಿ(54) ಅಲ್ಪಕಾಲದ ಅಸೌಖ್ಯದಿಂದ ನಿಧನರಾದರು. ಇವರು ಚಾಂತಾರು ಗ್ರಾಪಂಗೆ ಮೂರು ಬಾರಿ ಸದಸ್ಯರಾಗಿ ಆಯ್ಕೆಯಾಗಿದ್ದರು.

ನಾಟಕ, ಯಕ್ಷಗಾನ ಕ್ಷೇತ್ರದಲ್ಲಿ ಅಪಾರ ಆಸಕ್ತಿ ಹೊಂದಿದ್ದ ಇವರು, ಹೇರೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ಆಡಳಿತ ಸಮಿತಿಯಲ್ಲಿದ್ದ ಜೀರ್ಣೋದ್ಧಾರ ಕಾರ್ಯದಲ್ಲಿ ದುಡಿದಿದ್ದರು. ಉಮೇಶ್ ಶೆಟ್ಟಿ ಪತ್ನಿ, ಇಬ್ಬರು ಪುತ್ರಿಯರು, ನಾಲ್ವರು ಸಹೋದರರನ್ನು ಅಗಲಿದ್ದಾರೆ.

Edited By : PublicNext Desk
Kshetra Samachara

Kshetra Samachara

08/07/2022 03:06 pm

Cinque Terre

2.51 K

Cinque Terre

0

ಸಂಬಂಧಿತ ಸುದ್ದಿ