ಬೆಳ್ತಂಗಡಿ: ರಾಜ್ಯದ ಪ್ರಸಿದ್ಧ ಉರಗ ಪ್ರೇಮಿಗಳಲ್ಲಿ ಒಬ್ಬರಾದ ಬೆಳ್ತಂಗಡಿ ತಾಲೂಕಿನ ಸ್ನೇಕ್ ಜೋಯ್ ಅವರು ಇಂದು ಸಂಜೆ ಬೆಳ್ತಂಗಡಿ ತಾಲೂಕಿನ ಕಕ್ಕಿಂಜೆ ಗ್ರಾಮದಲ್ಲಿ '222'ನೇ ಕಾಳಿಂಗ ಸರ್ಪವನ್ನು ರಕ್ಷಿಸುವ ಮೂಲಕ ಇದೀಗ ಹೆಚ್ಚು ಜನಪ್ರಿಯರಾಗಿದ್ದಾರೆ. ಕಾಳಿಂಗ ಸರ್ಪ ರಕ್ಷಣೆ ವೇಳೆ ಕಾಲಿಗೆ ಕಚ್ಚಲು ದಾಳಿ ಮಾಡಿದ್ದು ಸ್ನೇಕ್ ಜಾಯ್ ಸ್ವಲ್ಪದರಲ್ಲೇ ಪಾರಾಗಿದ್ದಾರೆ ಇದೀಗ ಇದರ ವಿಡಿಯೋ ಕೂಡ ವೈರಲ್ ಅಗಿದೆ.
ಬೆಳ್ತಂಗಡಿ ತಾಲೂಕಿನ ಉಜಿರೆ ಗ್ರಾಮದ ಪೆರ್ಲ ನಿವಾಸಿ ತಂದೆ ದಿ|ಎಚ್.ಎಸ್ ಮಸ್ಕರೇನ್ಹಸ್ ತಾಯಿ ಜೆ.ಎ ಮಸ್ಕರೇನ್ಹಸ್ ದಂಪತಿಯ ಮಗನಾದ ಸ್ನೇಕ್ ಜೋಯ್(52) ಇವರು 2005ರಿಂದ ಹಾವಿನ ರಕ್ಷಣೆಯಲ್ಲಿ ತೊಡಗಿದ್ದು ಈವರೆಗೆ ಸುಮಾರು 9500 ಹಾವುಗಳನ್ನು ರಕ್ಷಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಸ್ನೇಕ್ ಜೋಯ್ 2007ರಲ್ಲಿ ಬೆಳ್ತಂಗಡಿ ತಾಲೂಕಿನ ಬದ್ಯಾರಿನ ಡೊಂಜೋಳಿಯಲ್ಲಿ ಕಾಳಿಂಗ ಸರ್ಪ ರಕ್ಷಣೆ ಮಾಡುವ ಮೂಲಕ ಮೊದಲ ಬಾರಿಗೆ ಯಶಸ್ವಿಯಾಗಿದ್ದು ಇದೀಗ ಒಟ್ಟು 222 ಕಾಳಿಂಗ ಸರ್ಪ ಹಿಡಿದು ಕಾಡಿಗೆ ಬಿಡುವಲ್ಲಿ ಯಶಸ್ವಿಯಾಗಿದ್ದಾರೆ. ಸ್ನೇಕ್ ಜೋಯ್ ಅವರು 2007ರಲ್ಲಿ ಬೆಳ್ತಂಗಡಿ ಕೋರ್ಟ್ ರೋಡ್ ಬಳಿ ನಾಗರಹಾವು ಹಿಡಿಯುವ ವೇಳೆ ತಮ್ಮ ಕೈಗೆ ಕಚ್ಚಿ ಗಂಭೀರ ಸ್ಥಿತಿಯಲ್ಲಿ ಸಾವು ಬದುಕಿನ ನಡುವೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಬದುಕಿ ಬಂದಿದ್ದರು. ನಂತರ 2009ನೇ ಇಸವಿಯಲ್ಲಿ ಉಜಿರೆ ಗ್ರಾಮದ ಪೆರ್ಲ ಬಳಿ ನಾಗರ ಹಾವು ಕಚ್ಚಿ ವಾಪಸ್ ಆಸ್ಪತ್ರೆಯಲ್ಲಿ ಜೀವನ್ಮರಣ ಹೊರಟ ಮಾಡಿ ಬದುಕಿ ಬಂದಿದ್ದರು.
ಸ್ನೇಕ್ ಜೋಯ್ ಅವರ ಬಳಿಗೆ ದೇಶ ವಿದೇಶದಿಂದ ಹಲವು ಮಂದಿ ಬಂದು ಹಾವಿನ ಬಗ್ಗೆ ಮಾಹಿತಿ ಪಡೆಯಲು ಬರುತ್ತಿರುತ್ತಾರೆ.
ಸ್ನೇಕ್ ಜೋಯ್ ಅವರು ಬೆಳ್ತಂಗಡಿ ತಾಲೂಕಿನ ಲಾಯಿಲ ಗ್ರಾಮದ ಸ್ನೇಕ್ ಅಶೋಕ್ ಅವರನ್ನು ತಮ್ಮ ಶಿಷ್ಯನಾಗಿ ಮಾಡಿಕೊಂಡಿದ್ದು ಅವರು ಕೂಡ ಹಾವಿನ ರಕ್ಷಣೆಯಲ್ಲಿ ತಾಲೂಕಿನಲ್ಲಿ ಜನಪ್ರಿಯರಾಗಿದ್ದಾರೆ ಹಾಗೂ ತಾಲೂಕಿನ ವಿವಿಧೆಡೆ ಹಾವಿನ ರಕ್ಷಣೆಯಲ್ಲಿ ತೊಡಗಿಸಿಕೊಂಡಿದ್ದಾರೆ.
PublicNext
28/06/2022 08:36 am