ಉಡುಪಿ: ಉಡುಪಿ ಅಜ್ಜರಕಾಡು ಜಿಲ್ಲಾಸ್ಪತ್ರೆಯ ಫಾರ್ಮಾಸಿಸ್ಟ್ ಆಗಿರುವ ಉಮೇಶ ನಾರಾಯಣ ಭಿರ್ತಿ ಎಂಬವರ ಮಗ ಆಯುಷ್ ಎಂಬವರು ನಿನ್ನೆಯಿಂದ ನಾಪತ್ತೆಯಾಗಿದ್ದಾರೆ.
ಆಯುಷ್ (22) ಅವರು ಮೆಕ್ಯಾನಿಕಲ್ ಇಂಜಿನಿಯರಿಂಗ್ ಮುಗಿಸಿ ಕೆಲಸದ ಹುಡುಕಾಟದಲ್ಲಿದ್ದು, ಕೆಲಸ ಸಿಗದ ಕಾರಣ ಸ್ವಲ್ಪ ಮಾನಸಿಕ ಖಿನ್ನತೆಗೆ ಒಳಗಾಗಿದ್ದರು. ಜೂ.24 ರಂದು ಬೆಳಿಗ್ಗೆ ತಾನು ಹೊರಗಡೆ ತಿರುಗಾಡಿ ಬರುವುದಾಗಿ ಹೇಳಿ ಹೋದವರು ಈವರೆಗೂ ಆಸ್ಪತ್ರೆಗೂ ವಾಪಾಸು ಬಾರದೇ, ಮನೆಗೂ ಬಾರದೇ ಮೊಬೈಲ್ ಸಂಪರ್ಕಕ್ಕೂ ಸಿಗದೇ ಕಾಣೆಯಾಗಿದ್ದಾರೆ ಎಂಬುದಾಗಿ ನೀಡಿದ ದೂರಿನಂತೆ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Kshetra Samachara
25/06/2022 05:28 pm