ಕಾಪು: ಸಾಮಾನ್ಯ ಮೊಳೆಯಿಂದ ಆನೆ ಕಲಾಕೃತಿ ರಚಿಸುವ ಮೂಲಕ ಕಾಪುವಿನ ಶಶಾಂಕ್ ಎಸ್. ಸಾಲಿಯಾನ್ ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್ ಗೆ ಸೇರ್ಪಡೆಗೊಂಡಿದ್ದಾರೆ. ಕೇರಳದಲ್ಲಿ ದುಷ್ಕರ್ಮಿಗಳ ಅಟ್ಟಹಾಸಕ್ಕೆ ಬಲಿಯಾದ ಗರ್ಭಿಣಿ ಆನೆಯ ಸಾವಿಗೆ ಮರುಕ ಪಟ್ಟು, ಮೊಳೆಗಳ ಜೋಡಣೆಯೊಂದಿಗೆ ಈ ಗ್ರಾಮೀಣ ಪ್ರತಿಭೆ ಆನೆಯ ಕಲಾಕೃತಿ ರಚಿಸಿದ್ದಾರೆ.
ಶಶಾಂಕ್ 5x4 ಫೋಮ್ ಶೀಟ್‌ನಲ್ಲಿ 4x 3.8 ಸೈಜ್ ನ ಆನೆಯ ಚಿತ್ರ ಬಿಡಿಸಿದ್ದು, ಇದಕ್ಕಾಗಿ 13,940 ಮೊಳೆಗಳನ್ನು ಬಳಸಿದ್ದಾರೆ. ಬ್ರಶ್, ಬಣ್ಣ ಉಪಯೋಗಿಸದೆ ಬಿಡಿಸಿರುವ ಕಲಾಕೃತಿಯ ಚಿತ್ರೀಕರಣದ ದಾಖಲೆಗಳನ್ನು ಆನ್ ಲೈನ್ ಮೂಲಕ ಕಳುಹಿಸಿದ್ದು, ಪರೀಕ್ಷಿಸಿದ ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್ ಸಂಸ್ಥೆ ಪ್ರಮಾಣ ಪತ್ರ ರವಾನಿಸಿದೆ.
ಕಾಪು ತಾಲೂಕಿನ ಉಳಿಯಾರಗೋಳಿ ನಿವಾಸಿ ಶಿಕ್ಷಣ ಸಂಯೋಜಕ ಶಂಕರ್ ಸುವರ್ಣ- ಪುಷ್ಪಾ ಸಾಲಿಯಾನ್ ದಂಪತಿ ಪುತ್ರ ಶಶಾಂಕ್ ಬಿಕಾಂ ಪದವೀಧರನಾಗಿದ್ದು ಖಾಸಗಿ ಕಂಪೆನಿ ಉದ್ಯೋಗಿ. ಈ ಸಾಧನೆಗೆ ತಂದೆ-ತಾಯಿಯ ಪ್ರೋತ್ಸಾಹದ ಜೊತೆಗೆ ಸ್ನೇಹಿತರಾದ ಧೀರಜ್, ಸೌರಭ್, ಗೌರವ್, ಮನೀಶ್, ಶಶ್ಮಿತಾ, ಜೋಸ್ವಿನ್ ಸಹಕಾರ ನೀಡಿದ್ದಾರೆ. ಸುಶಾಂತ್ ಶೆಟ್ಟಿ, ಶಶ್ಮಿತಾ ಸಾಲಿಯಾನ್, ಐಶ್ವರ್ಯ ಮತ್ತು ಶ್ರೀಶ ಶೆಟ್ಟಿ ಪ್ರಾಯೋಜಕತ್ವ ವಹಿಸಿದ್ದರು ಎಂದರು.
Kshetra Samachara
23/06/2022 06:35 pm