ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಉಡುಪಿ: ಮುಖವಾಡಗಳ ಜಗತ್ತಿನಲ್ಲೊಂದು ಸುತ್ತು!

ವಿಶೇಷ ವರದಿ: ರಹೀಂ ಉಜಿರೆ

ಉಡುಪಿ: ಪ್ರತಿ ಮನುಷ್ಯನೂ ಮುಖವಾಡಗಳಲ್ಲೇ ಬದುಕುತ್ತಾನೆ ಎಂಬ ಮಾತಿದೆ. ಇದು ಸರಿಯೋ ತಪ್ಪೋ ಗೊತ್ತಿಲ್ಲ. ಆದರೆ ಪ್ರಪಂಚದ ಅಷ್ಟೂ ದೇಶಗಳಲ್ಲಿ ವೆರೈಟಿ ವೆರೈಟಿ ಜನಪದ ಮುಖವಾಡಗಳಿವೆ. ಇಂತಹ ವಿಶ್ವದ ಸುಮಾರು ಐವತ್ತು ದೇಶಗಳ ನೂರೈವತ್ತಕ್ಕೂ ಅಧಿಕ ಜಾನಪದ ಮುಖವಾಡಗಳನ್ನು ಕಲಾಪ್ರೇಮಿ, ಡಾ.ಕಿರಣ್ ಆಚಾರ್ಯ ಸಂಗ್ರಹಿಸಿ, ತಮ್ಮ ಗ್ಯಾಲರಿಯಲ್ಲಿಟ್ಟಿದ್ದಾರೆ. ಬನ್ನಿ‌.. ಈ ಅಪರೂಪದ ಮುಖವಾಡಗಳ ಜಗತ್ತಿನಲ್ಲೊಂದು ಸುತ್ತು ಹಾಕಿ ಬರೋಣ.

ಇದು ಉಡುಪಿಯ ಅದಿತಿ ಆರ್ಟ್ ಗ್ಯಾಲರಿ. ಕಲಾಕೃತಿಗಳಿಗೆ ಪ್ರಸಿದ್ಧಿ ಈ ಗ್ಯಾಲರಿ. ಆದರೆ ಡಾ.ಕಿರಣ್ ಆಚಾರ್ಯ ತಾವು ಪ್ರವಾಸ ಮಾಡಿರುವ ಹಲವು ದೇಶಗಳ ನೂರೈವತ್ತಕ್ಕೂ ಮಿಕ್ಕಿದ ಮುಖವಾಡಗಳನ್ನು ಇಲ್ಲಿ ಪ್ರದರ್ಶನಕ್ಕಿಟ್ಟಿದ್ದಾರೆ. ಮುಖವಾಡಗಳು ಕೇವಲ ಚಹರೆಗಳನ್ನು ಮರೆಮಾಚಲು, ಅಲಂಕಾರಕ್ಕಲ್ಲದೆ ಅರೋಗ್ಯ ವೃದ್ಧಿಸಲು, ಶತ್ರುಬಾಧೆಯನ್ನು ನಿವಾರಿಸಲು ಬಳಸಲಾಗುತ್ತಿತ್ತು. ಅನೇಕ ಯುದ್ಧಗಳಲ್ಲಿ ಶತ್ರುವಿನ ದಾಳಿಯನ್ನು ತಡೆಯಲು ಉಪಯೋಗಿಸಲಾಗುತ್ತಿತ್ತು. ಹಬ್ಬಹರಿದಿನ, ಕಾರ್ನಿವಾಲ್, ಧಾರ್ಮಿಕ ಆಚರಣೆಗಳಲ್ಲದೆ ಮಾಟ ಮಂತ್ರ ತಂತ್ರ. ಇನ್ನೂ ಹಲವು ಸಂದರ್ಭಗಳಲ್ಲಿ ಬಳಸುವ ನೂರಾರು ಮುಖವಾಡಗಳನ್ನು ಉಡುಪಿ ಭಾಗದ ಕಲಾಸಕ್ತರಿಗೂ ಪರಿಚಯಿಸುವ ದೃಷ್ಟಿಯಿಂದ ಕಲಾಸಕ್ತರಿಗಾಗಿ ಡಾ. ಕಿರಣ್ ಆಚಾರ್ಯ ಮೂರು ದಿನಗಳ ಪ್ರದರ್ಶನವನ್ನೂ ಏರ್ಪಡಿಸಿದ್ದಾರೆ.

ದಕ್ಷಿಣ ಅಮೇರಿಕ, ಇಟಲಿ, ಶ್ರೀಲಂಕಾ, ಬರ್ಮಾ, ನೇಪಾಳ, ಆಫ್ರಿಕಾ ಮುಂತಾದ ದೇಶಗಳ ಸುಮಾರು ನೂರೈವತ್ತಕ್ಕೂ ಅಧಿಕ ಮುಖವಾಡಗಳನ್ನು ಇಲ್ಲಿ ಅಚ್ಚುಕಟ್ಟಾಗಿ, ಆಕರ್ಷಕವಾಗಿ ಜೋಡಿಸಿಡಲಾಗಿದೆ. ಅಧ್ಯಯನಾಸಕ್ತರಿಗಾಗಿ ಮುಖವಾಡದ ಸಂಕ್ಷಿಪ್ತ ವಿವರಣೆಯನ್ನೂ ಬರೆದಿಡಲಾಗಿದೆ. ಅಪರೂಪ ಎನ್ನಬಹುದಾದ ಈ ಮುಖವಾಡಗಳ ಪ್ರದರ್ಶನವನ್ನು ಜೂನ್ 17ರಿಂದ ಮೂರು ದಿನಗಳ ಕಾಲ ಏರ್ಪಡಿಸಲಾಗಿದೆ. ನೀವೂ ಒಮ್ಮೆ ನೋಡಿ ಬನ್ನಿ.

Edited By : Manjunath H D
PublicNext

PublicNext

16/06/2022 05:50 pm

Cinque Terre

57.78 K

Cinque Terre

3

ಸಂಬಂಧಿತ ಸುದ್ದಿ