ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಉಡುಪಿ: ಮಾತುಬಾರದಾತನಿಗೆ ಮರುಜೀವ, ಐದು ವರ್ಷಗಳ ಬಳಿಕ ಮರಳಿ ಗೂಡಿಗೆ

ಉಡುಪಿ: ಮಾತು ಬಾರದ ಯುವಕನೊಬ್ಬ ತನ್ನ ಊರು ಬಿಟ್ಟು ಉಡುಪಿಗೆ ಬಂದು ಐದು ವರ್ಷಗಳ ಬಳಿಕ ಮಾತಿನೊಂದಿಗೆ ತನ್ನ ಹೆತ್ತವರನ್ನು ಸೇರಿದ ಅಪೂರ್ವ ಪ್ರಸಂಗ ನಡೆದಿದೆ.

ಮೂಲತಃ ಆಂಧ್ರ ಪ್ರದೇಶದ ಬೋಗಿ ಪ್ರಸಾದ್ (25) ಎಂಬ ಈ ಯುವಕನಿಗೆ ಸರಿಯಾಗಿ ಮಾತು ಬರುತ್ತಿರಲಿಲ್ಲ.ಆಂದ್ರದಿಂದ ನಾಪತ್ತೆಯಾದ ಈ ಯುವಕ ಉಡುಪಿಯ ಸಮಾಜಸೇವಕ ವಿಶು ಶೆಟ್ಟಿ ಕಣ್ಣಿಗೆ ಬಿದ್ದಿದ್ದಾನೆ.ವೈದ್ಯರ ಚಿಕಿತ್ಸೆ ಮತ್ತು ಮಾನವೀಯ ಸೇವೆ ಬಳಿಕ ಈತ ಮಾತನಾಡಲು ಪ್ರಾರಂಭಿಸಿದ್ದಾನೆ.ಈ ವೇಳೆ 5 ವರ್ಷದಿಂದ ನಾಪತ್ತೆಯಾಗಿದ್ದ ಯುವಕ ತೆಲುಗಿನಲ್ಲಿ ಅಸ್ಪಷ್ಟವಾಗಿ ತನ್ನ ವಿಳಾಸ ತಿಳಿಸಿದ್ದಾನೆ. ನಂತರ ವಿಶು ಶೆಟ್ಟಿ ಅವರು ತುಂಬಾ ಕಷ್ಟಪಟ್ಟು ಈತನ ಕುಟುಂಬವನ್ನು ಪತ್ತೆಹಚ್ಚುವಲ್ಲಿ ಯಶಸ್ವಿಯಾಗಿದ್ದಾರೆ.

ಇವನನ್ನು ಮನೆಯವರಿಗೆ ಹಸ್ತಾಂತರಮಾಡುವಾಗ ಅವರ ಕಣ್ಣಲ್ಲಿ ಆನಂದಬಾಷ್ಪಗಳಿದ್ದವು.ನನ್ನ ಸಹೋದರ ನಾಪತ್ತೆಯಾಗಿ 5 ವರ್ಷ ಆಯಿತು. ಪೊಲೀಸರ ಸಹಾಯದಿಂದ ನಿಮ್ಮನ್ನು ಸಂಪರ್ಕಿಸಿ ಸಹೋದರನನ್ನು ಮರಳಿ ಪಡೆಯುವಂತಾಯಿತು. ನಾವು ಆತ ಬದುಕಿರುವ ಆಸೆಯನ್ನೇ ಬಿಟ್ಟಿದ್ದೆವು. ನಾವು ತುಂಬಾ ಬಡವರು. ಪ್ರಯಾಣದ ಖರ್ಚು ಭರಿಸುವುದೂ ಅಸಾಧ್ಯವಿತ್ತು. ಪ್ರಯಾಣದ ಖರ್ಚುಗಳನ್ನು ವಿಶು ಶೆಟ್ಟಿ ಭರಿಸುವ ಮೂಲಕ ನಮಗೆ ತುಂಬಾ ಸಹಾಯವಾಯಿತು. ಆಸ್ಪತ್ರೆಯ ವೈದ್ಯರು ಮತ್ತು ಸಿಬ್ಬಂದಿಗಳ ಸಹಕಾರವನ್ನು ನಾವು ಜೀವನದಲ್ಲಿ ಯಾವತ್ತೂ ಮರೆಯುವುದಿಲ್ಲ ಎಂದು ಯುವಕನ ಸಹೋದರಿ ಸತ್ಯವೇಣಿ ಕಣ್ಣೀರಿಟ್ಟಿದ್ದಾರೆ.

Edited By : Manjunath H D
PublicNext

PublicNext

05/05/2022 01:47 pm

Cinque Terre

24.56 K

Cinque Terre

1