ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕುಂದಾಪುರ: ಭೋರ್ಗರೆವ ಸಮುದ್ರ ಕಿನಾರೆಯಲ್ಲಿ ಸತಿಪತಿಗಳಾದ ಜೋಡಿ !

ಕುಂದಾಪುರ: ಕುಂದಾಪುರ ತಾಲೂಕಿನ ಕೋಡಿಯ ಸಮುದ್ರ ಕಿನಾರೆಯಲ್ಲಿ ನಿನ್ನೆ ನಡೆದ ಮದುವೆಯೊಂದು ಸಖತ್ ಸುದ್ದಿ ಮತ್ತು ಸದ್ದು ಮಾಡುತ್ತಿದೆ.

ಇಲ್ಲಿನ ಅರಬ್ಬೀ ಸಮುದ್ರದ ಹಿನ್ನೆಲೆಯಲ್ಲಿ ಸಮುದ್ರದ ದಂಡೆಯ ಮರಳಿನ ರಾಶಿಯ ನಡುವೆ ವಧು – ವರರು ಹಸೆಮಣೆ ಏರಿ ಹಿಂದೂ ಧಾರ್ಮಿಕ ಪದ್ಧತಿಯಂತೆ ಸತಿಪತಿಗಳಾಗಿದ್ದಾರೆ.

ಭವ್ಯವಾಗಿ ಸಿಂಗರಿಸಿದ ಕಲ್ಯಾಣಮಂಟಪ, ಬ್ಯಾಂಡು ವಾದ್ಯಗಳ ಸದ್ದು, ಆಹ್ವಾನಿತರ ಕಲರವ ಯಾವುದೂ ಇಲ್ಲದ ಈ ವಿವಾಹದಲ್ಲಿ ಪುರೋಹಿತರ ಮಂತ್ರಗಳಿಗೆ ಜೊತೆಯಾದುದು ಭೋರ್ಗರೆವ ಸಮುದ್ರದ ಉಕ್ಕೇರುವ ಅಲೆಗಳ ಅಬ್ಬರದ ಸದ್ದು, ಬೀಸುವ ಗಾಳಿಯ ಮೊರೆತ ಇಷ್ಟೇ.

ಬೆಳಿಗ್ಗಿನ ಶುಭ ಮುಹೂರ್ತದಲ್ಲಿ ಮಂಡ್ಯದ ಎಚ್. ಎನ್. ಚೈತ್ರಿಕಾ ಎಂಬ ವಧು ಕೋಲಾರದ ಮಾದೇಶ ಎಂಬ ವರನನ್ನು ವರಿಸಿ, ಸಮುದ್ರ ದಡದಲ್ಲಿ ಸಪ್ತಪದಿ ತುಳಿದು ಸತಿಪತಿಗಳಾದರು.

ಹೀಗೆ ವಿಶಿಷ್ಟ ರೀತಿಯಲ್ಲಿ ವಿವಾಹವಾದ ಹುಡುಗ – ಹುಡುಗಿ ಇಬ್ಬರೂ ಬೆಂಗಳೂರಿನಲ್ಲಿ ಕಾರ್ಪೊರೇಟ್ ಕಂಪೆನಿಯ ನೌಕರರಾಗಿದ್ದಾರೆ.ಈ ಅಪರೂಪದ ಮದುವೆಯಲ್ಲಿ ವಧು – ವರರ ತಂದೆ ತಾಯಂದಿರು ಮತ್ತು ಆಪ್ತ ಬಂಧುಗಳಷ್ಟೇ ಹಾಜರಿದ್ದರು.

Edited By :
Kshetra Samachara

Kshetra Samachara

08/04/2022 09:54 am

Cinque Terre

13.2 K

Cinque Terre

0

ಸಂಬಂಧಿತ ಸುದ್ದಿ