ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮಣಿಪಾಲ: ಅಪಘಾತಕ್ಕೀಡಾದ ವ್ಯಕ್ತಿಯಿಂದ ಅಂಗಾಂಗ ದಾನ: ಆರು ಜನರಿಗೆ ಜೀವದಾನ!

ಮಣಿಪಾಲ: ಬ್ರಹ್ಮಾವರದಲ್ಲಿ  ರಸ್ತೆ ಅಪಘಾತಕ್ಕೀಡಾದ ವ್ಯಕ್ತಿ ,ತಮ್ಮ ಅಂಗಗಳನ್ನು ದಾನ ಮಾಡುವ ಮೂಲಕ ಆರು ಜನರಿಗೆ ಜೀವದಾನ ಮಾಡಿ ಸಾರ್ಥಕತೆ ಮೆರೆದಿದ್ದಾರೆ.

ಬ್ರಹ್ಮಾವರ ತಾಲೂಕಿನ ಉಪ್ಪಿನಕೋಟೆ ಬಳಿ  ರಸ್ತೆ ಅಪಘಾತಕ್ಕೀಡಾಗಿದ್ದ ಶ್ರೀನಿವಾಸ ಎಂಬುವರು ಬಹುತೇಕ ಪ್ರಾಣಾಪಾಯದಲ್ಲಿದ್ದರು.ಇವರು ಸಾಲಿಗ್ರಾಮದ ನಿವಾಸಿ ರಾಜು ನಾಯರಿ ಎಂಬುವರ ಮಗ.ಇವರನ್ನು ಮಣಿಪಾಲ ಕೆಎಂಸಿಗೆ ದಾಖಲಿಸಲಾಗಿತ್ತು.ಚಿಕಿತ್ಸೆ ನಡೆಯುತ್ತಿರುವಾಗ ಶ್ರೀನಿವಾಸ್  ಅವರ ಮೆದುಳು ನಿಷ್ಕ್ರಿಯಗೊಂಡಿತ್ತು.ಈ ವೇಳೆ ಅವರ ತಂದೆ, ಮಗನ ಅಂಗಗಳನ್ನು ದಾನ ಮಾಡಲು ಇಚ್ಛಿಸಿದ್ದಾರೆ. ಅದರಂತೆ ಎರಡು ಮೂತ್ರಪಿಂಡಗಳು, ಯಕೃತ್ತು, ಚರ್ಮ  ಮತ್ತು ಎರಡು ಕಾರ್ನಿಯಾಗಳು/ಕಣ್ಣುಗುಡ್ಡೆಗಳನ್ನು ತೆಗೆದು  6 ಜನರ ಜೀವ ಉಳಿಸಲಾಗಿದೆ.

 

ಎರಡು ಕಾರ್ನಿಯಾಗಳು, ಎರಡು ಮೂತ್ರಪಿಂಡ, ಚರ್ಮ ವನ್ನು ಕಸ್ತೂರ್ಬಾ  ಆಸ್ಪತ್ರೆ ಮಣಿಪಾಲದ ರೋಗಿಗಳಿಗೆ ಬಳಸಲಾಯಿತು, ಯಕೃತ್ತನ್ನು ಬೆಂಗಳೂರಿನ ಆಸ್ಟರ್ ಆಸ್ಪತ್ರೆಗೆ ಕಳುಹಿಸಿಕೊಡಲಾಯಿತು.

Edited By : Shivu K
Kshetra Samachara

Kshetra Samachara

05/04/2022 10:15 pm

Cinque Terre

14.06 K

Cinque Terre

0

ಸಂಬಂಧಿತ ಸುದ್ದಿ