ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮಣಿಪಾಲ: ಒಬ್ಬ ಮಗನಿಗೆ ಕ್ಯಾನ್ಸರ್: ಮತ್ತೊಬ್ಬ ಮರ್ಡರ್? ನೆರವಿನ ಹಸ್ತಕ್ಕೆ ಕಾದಿದೆ ತಾಯಿ ಜೀವ!

ವಿಶೇಷ ವರದಿ: ರಹೀಂ ಉಜಿರೆ

ಮಣಿಪಾಲ: ವಿಧಿ ಎಷ್ಟೊಂದು ಕ್ರೂರಿ ಎಂಬುದು ಪದೇಪದೆ ಸಾಬೀತಾಗುತ್ತಲೇ ಇರುತ್ತದೆ. ಈ ತಾಯಿಯ ಒಬ್ಬ ಮಗನಿಗೆ ಕ್ಯಾನ್ಸರ್ ಮತ್ತೊಬ್ಬ ಮಗ ಅನುಮಾನಾಸ್ಪದ ರೀತಿಯಲ್ಲಿ ಸಾವು ಕಂಡಿದ್ದಾನೆ.

ಇದ್ದ ಇಬ್ಬರು ಗಂಡುಮಕ್ಕಳು ಕಣ್ಣೆದುರೇ ಈ ದುರ್ಗತಿ ಬಂದಿದ್ದು ,ಈ ತಾಯಿ ಕಣ್ಣೀರಲ್ಲೇ ಕೈ ತೊಳೆಯುತ್ತಿದ್ದಾಳೆ.

ಮಣಿಪಾಲದ ಹೊರವಲಯದಲ್ಲಿ ಬದುಕು ಸಾಗಿಸುತ್ತಿರುವ ಈಕೆಯ ಹೆಸರು ನೂರ್ ಜಹಾನ್ . ಮೂರು ದಶಕಗಳ ಹಿಂದೆ ಬಾಗಲಕೋಟೆಯಿಂದ ವಲಸೆ ಬಂದ ಈಕೆಗೆ ಇಬ್ಬರು ಮಕ್ಕಳು.

ಗಂಡ ಇಲ್ಲದಿದ್ದರೂ ಬೆಳೆದ ಮಕ್ಕಳ ಆಶ್ರಯದಲ್ಲಿ ಈ ಅಮ್ಮ ಇದ್ದಳು.ಆದರೆ ಎರಡು ವರ್ಷಗಳ ಹಿಂದೆ ಒಬ್ಬ ಮಗ ಕ್ಯಾನ್ಸರ್ ಗೆ ತುತ್ತಾದ. ಮಗನಿಗೆ ಶಸ್ತ್ರ ಚಿಕಿತ್ಸೆ ಆಗಿದೆ.ಕೂಲಿ ನಾಲಿ ಮಾಡುತ್ತಾ ,ಇದ್ದ ನೂರ್ ಜಹಾನ್ ಬದುಕಿಗೆ ಈಗೊಂದು ಎರಡು ವಾರಗಳ ಹಿಂದೆ ಮತ್ತೊಂದು ಬರಸಿಡಿಲು ಬಡಿದಿದೆ, ತನ್ನ ಎರಡನೇ ಮಗ ಅನುಮಾನಾಸ್ಪದ ರೀತಿಯಲ್ಲಿ ಸಾವನ್ನಪ್ಪಿದ್ದಾನೆ. ಆತನ ಶವ ಮಣ್ಣಪಳ್ಳ ಕೆರೆಯಲ್ಲಿ ಸಿಕ್ಕಿದೆ. ಈತನದ್ದು ಕೊಲೆ ಎಂಬ ಶಂಕೆಯೂ ಇದೆ.

ಹೀಗೆ ಇದ್ದ ಇಬ್ಬರೂ ಮಕ್ಕಳಿಗೆ ಕಣ್ಣೆದುರೇ ಹೀಗಾಗುವ ಕಷ್ಟ ಯಾವ ತಾಯಿಗೂ ಬೇಡ. ಕ್ಯಾನ್ಸರ್ ಪೀಡಿತ ಮಗ ಮತ್ತು ಅನುಮಾನಾಸ್ಪದವಾಗಿ ಸತ್ತ ಮಗ ಇಬ್ಬರೂ ಕೂಲಿ ಕೆಲಸ ಮಾಡಿ ಈಕೆಯನ್ನು ಸಾಕುತ್ತಿದ್ದರು. ಈಗ ಒಬ್ಬ ಇಲ್ಲ,ಇನ್ನೊಬ್ಬ ಇದ್ದೂ ಇಲ್ಲದಂತಾಗಿದೆ ಈ ತಾಯಿಯ ಸ್ಥಿತಿ.

ಸದ್ಯ ಔಷಧಿ ಅಷ್ಟೇಸಲ್ಲದೆ ತುತ್ತು ಅನ್ನಕ್ಕೂ ತತ್ವಾರ. ಮಣಿಪಾಲದ ಹೊರವಲಯದ ಸರಕಾರಿ ಜಾಗದಲ್ಲಿ ಕಟ್ಟಿದ ಮನೆಗೂ ಸರ್ಕಾರ ಹಕ್ಕುಪತ್ರ ನೀಡಲು ಸತಾಯಿಸುತ್ತಿದೆ. ದಾನಿಗಳ,ಸಹೃದಯರ ನೆರವಿನ ಹಸ್ತಕ್ಕಾಗಿ ಮನೆ ಬಾಗಿಲಲ್ಲಿ ನಿಂತಿದ್ದಾರೆ ಈ ನೊಂದ ತಾಯಿ.

(ಇವರಿಗೆ ಸಹಾಯ ಮಾಡುವವರು ಈ ನಂಬರ್ 8861038924 ಗೆ ಸಂಪರ್ಕಿಸಿ)

Edited By : Manjunath H D
PublicNext

PublicNext

24/03/2022 05:31 pm

Cinque Terre

55.2 K

Cinque Terre

12

ಸಂಬಂಧಿತ ಸುದ್ದಿ