ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಉಡುಪಿ: ವೈದ್ಯರ ಸೋಗಿನಲ್ಲಿ ಬಂದು ಕ್ಯಾನ್ಸರ್ ರೋಗಿಗೆ ಮೋಸ: ನ್ಯಾಯಕ್ಕಾಗಿ ಬಡ ದಂಪತಿ ಅಲೆದಾಟ

ಹಿರಿಯಡ್ಕ : ಮೋಸ ಹೋಗುವವರು ಇರೋ ತನಕ ಮೋಸ ಮಾಡುವವರು ಇದ್ದೇ ಇರ್ತಾರೆ. ಹಾಗೇ ನಕಲಿ ವೈದ್ಯರು ಕ್ಯಾನ್ಸರ್ ಪೀಡಿತ ಮಹಿಳೆಯನ್ನೇ ಯಾಮಾರಿಸಿದ ಘಟನೆಯೊಂದು ಹಿರಿಯಡ್ಕ ಪೊಲೀಸ್ ಠಾಣೆ ವ್ಯಾಪ್ತಿಯ ಕುಕ್ಕೆಹಳ್ಳಿ ಎಂಬಲ್ಲಿ ನಡೆದಿದೆ. ಕುಕ್ಕೆಹಳ್ಳಿಯಲ್ಲಿ ಕೂಲಿ ಕಾರ್ಮಿಕ ಸುಬ್ಬಣ್ಣ(66) ಹಾಗೂ ಬೇಬಿ ಕುಲಾಲ್(55) ದಂಪತಿ ವಾಸವಾಗಿದ್ದಾರೆ. ಇವರಿಗೆ ಒಬ್ಬಳೇ ಮಗಳು, ಇವರದ್ದು ಕಡು ಬಡತನದ ಕುಟುಂಬ.

4 ವರ್ಷಗಳ ಬೇಬಿ ಕುಲಾಲ್ ಕ್ಯಾನ್ಸರ್ ಕಾಯಿಲೆಗೆ ತುತ್ತಾಗಿದ್ದಾರೆ. ಮಂಗಳೂರಿನ ವೆನ್‌ಲಾಕ್ ಆಸ್ಪತ್ರೆಯಲ್ಲಿ ಶಸ್ತ್ರ ಚಿಕಿತ್ಸೆಗೂ ಒಳಪಡಿಸಲಾಗಿತ್ತು. 2022ರ ಫೆ.5ರಂದು ಮನೆಯಲ್ಲಿ ಬೇಬಿ ಒಬ್ಬರೇ ಇದ್ದಾಗ ಅಪರಿಚಿತರಿಬ್ಬರು ಬೈಕ್‌ನಲ್ಲಿ ಬಂದು, ನಾವು ಕರ್ನಾಟಕ ಸರಕಾರದ ಆರೋಗ್ಯ ಇಲಾಖೆಯಿಂದ ಬಂದಿರುವ ವೈದ್ಯರು ಎಂದು ಪರಿಚಯಿಸಿಕೊಂಡಿದ್ದಾರೆ. ನಿಮ್ಮ ಕ್ಯಾನ್ಸರ್ ಕಾಯಿಲೆಗೆ ಇನ್ನೂ ಮೂರು ಇಂಜೆಕ್ಷನ್‌ಗಳನ್ನು ನೀಡಬೇಕಾಗಿದೆ ಎಂದು ಇಲಾಖೆಗೆ ಸೂಚನೆ ಬಂದಿದೆ. ಇದರಿಂದ ನೀವು ಈಗಾಗಲೇ ಅನುಭವಿಸುತ್ತಿರುವ ನೋವು ಸಂಪೂರ್ಣವಾಗಿ ದೂರವಾಗಲಿದೆ ಎಂದು ನಂಬಿಸಿದ್ದಾರೆ. ಈಗಾಗಲೇ ಕ್ಯಾನ್ಸರ್ ನ ನೋವಿನಿಂದ ನೊಂದಿದ್ದ ಬೇಬಿ ಇವರ ಮಾತನ್ನು ನಂಬಿ ಅವರಿಗೆ ಹದಿನೆಂಟು ಸಾವಿರ ರೂ ಕೊಟ್ಟಿದ್ದಾರೆ.

ಹಣ ಪಡೆದುಕೊಂಡ ನಕಲಿ ವೈದ್ಯರು ,ಇಂದೇ ಔಷಧಿ ತರುತ್ತೇವೆ ಎಂದು ಹೇಳಿ ಅಲ್ಲಿಂದ ಪರಾರಿಯಾಗಿದ್ದಾರೆ. ತಾವು ಮೋಸ ಹೋಗಿರಬಹುದೆಂದು ಶಂಕಿಸಿದ ದಂಪತಿ, ಕುಟುಂಬದ ವೈದ್ಯೆ ಡಾ.ಸುಮ ಶಶಿಕಿರಣ ಶೆಟ್ಟಿ ಅವರಿಗೆ ಮಾಹಿತಿ ನೀಡಿದ್ರು. ಹಣ ಪಡೆದುಕೊಂಡವರು ನಕಲಿ ವೈದ್ಯರು ಎಂಬುದು ಇವರಿಗೆ ಮನದಟ್ಟಾದ ಬಳಿಕ ಹಿರಿಯಡ್ಕ ಠಾಣೆಗೆ ದೂರು ನೀಡಿದ ಬಡ ದಂಪತಿ ,ಈಗ ನ್ಯಾಯಕ್ಕಾಗಿ ಉಡುಪಿಯ ಮಾನವ ಹಕ್ಕುಗಳ ರಕ್ಷಣಾ ಪ್ರತಿಷ್ಠಾನದ ಕದ ತಟ್ಟಿದ್ದಾರೆ.

ಕೇವಲ ಕೂಲಿ ಆಧಾರದಿಂದಲೇ ದಿನ ಕಳೆಯುತ್ತಿರುವ ಈ ಕುಟುಂಬ ತಾನು ಈಗಾಗಲೇ ತೆಗೆದುಕೊಂಡಿರುವ 18 ಸಾವಿರ ರೂ.ಸಾಲವನ್ನು ತೀರಿಸುವುದು ಹೇಗೆ ಎಂಬ ಚಿಂತೆಯಲ್ಲಿ ಮುಳುಗಿದೆ.

ರಹೀಂ ಉಜಿರೆ, ಪಬ್ಲಿಕ್ ನೆಕ್ಸ್ಟ್, ಉಡುಪಿ

Edited By : Nagesh Gaonkar
PublicNext

PublicNext

17/03/2022 05:42 pm

Cinque Terre

35.03 K

Cinque Terre

1

ಸಂಬಂಧಿತ ಸುದ್ದಿ