ಮುಲ್ಕಿ: ಕಳೆದ ಎರಡು ದಿನಗಳಿಂದ ಹಳೆಯಂಗಡಿ ಪೇಟೆಯಲ್ಲಿ ಸುತ್ತಾಡಿಕೊಂಡು ಸಿಕ್ಕಸಿಕ್ಕ ವಾಹನಗಳಿಗೆ ಹಾನಿ ಮಾಡುತ್ತಿದ್ದ ಮಾನಸಿಕ ಅಸ್ವಸ್ಥನನ್ನು ಮುಲ್ಕಿ ಮೈಮುನ ಫೌಂಡೇಶನ್ ಆಪತ್ಬಾಂಧವ ಆಶ್ರಮದಲ್ಲಿ ಆಶ್ರಯ ನೀಡಲಾಯಿತು.
ಸುರತ್ಕಲ್ ಟೋಲ್ ಗೇಟ್ ವಿರುದ್ಧದ ಹೋರಾಟದಲ್ಲಿ ಪೊಲೀಸರಿಂದ ಸಾಕಷ್ಟು ಕೇಸ್ ಜಡಿದು ಕೊಂಡ ಆಶಿಫ್ ಆಪತ್ಬಾಂಧವ, ನ್ಯಾಯಾಲಯ ವಕೀಲರ ಕಚೇರಿ ಸುತ್ತಾಟದ ಮಧ್ಯೆಯೂ ನಮ್ಮ ಕರೆಗೆ ಸ್ಪಂದಿಸಿ ಆಂಬುಲೆನ್ಸ್ ಕಳಿಸಿ ಮಾನಸಿಕ ಅಸ್ವಸ್ಥನನ್ನು ರಕ್ಷಿಸಿ ತಮ್ಮ ಆಶ್ರಮದಲ್ಲಿ ಆಶ್ರಯ ನೀಡಿದರು.
Kshetra Samachara
03/03/2022 03:46 pm