ಉದ್ಯಾವರ: ಯುದ್ಧಗ್ರಸ್ಥ ಉಕ್ರೇನ್ ನ ಐವನೊ-ಫ್ರಾನ್ ಕಿವಸ್ಕ್ ನ್ಯಾಷನಲ್ ಮೆಡಿಕಲ್ ವಿಶ್ವವಿದ್ಯಾನಿಲಯದಲ್ಲಿ ತಿಂಗಳ ಹಿಂದಷ್ಟೇ ಎಂಬಿಬಿಎಸ್‌ಗೆ ದಾಖಲಾಗಿದ್ದ ಉಡುಪಿಯ ಉದ್ಯಾವರದ ಸಂಪಿಗೆ ನಗರದ ಮೃಣಾಲ್ ರಾಜೇಶ್ ರಾತ್ರಿ ಮನೆ ತಲುಪಿದ್ದಾರೆ.ಹೀಗಾಗಿ ಆತಂಕದಲ್ಲೇ ದಿನಕಳೆಯುತ್ತಿದ್ದ ಮನೆಯಲ್ಲಿ ಸಂಭ್ರಮ ಮನೆ ಮಾಡಿದೆ.
ಉಡುಪಿಯ ಏಳು ವಿದ್ಯಾರ್ಥಿಗಳು ಉಕ್ರೇನ್ ನಲ್ಲಿ ವ್ಯಾಸಂಗ ಮಾಡುತ್ತಿದ್ದು ,ಯುದ್ಧದ ಬಳಿಕ ಮೊದಲು ಮನೆ ತಲುಪಿದ ಹೆಗ್ಗಳಿಗೆ ಮೃಣಾಲ್ ರದ್ದು.ನಿನ್ನೆ ಬೆಳಿಗ್ಗೆಯೇ ಬೆಂಗಳೂರು ತಲುಪಿದ ಮೃಣಾಲ್ ,ರಾತ್ರಿ ಮನೆ ಸೇರಿಕೊಂಡಾಗ ಸಹಜವಾಗಿಯೇ ಹೆತ್ತವರ ಕಣ್ಣಲ್ಲಿ ಆನಂದ ಭಾಷ್ಪ ಇದ್ದವು.ಯುದ್ಧದ ಭೀಕರತೆಯ ನಡುವೆ ನಮಗೆ ನಾವೇ ಸನಾಧಾನ ಹೇಳಿಕೊಳ್ಳುತ್ತಾ ದಿನ ದೂಡಿದೆವು ,ನಮಗೆ ಅಲ್ಲಿದ್ದ ಸ್ನೇಹಿತರು ಬಿಟ್ಟರೆ ಬೇರಾರೂ ನಮಗೆ ಸಹಾಯಮಾಡಲಿಲ್ಲ.ಕೊನೆಗೆ ,ಶಿಕ್ಷಣಕ್ಕಾಗಿ ಅಲ್ಲಿಗೆ ಕರೆದೊಯ್ದವರೂ ನಮ್ಮ ನೆರವಿಗೆ ಬರಲಿಲ್ಲ ಎಂದು ಮೃಣಾಲ್ ಹೇಳಿದ್ದಾರೆ.ಒಟ್ಟಾರೆ ಉದ್ಯಾವರದ ಮನೆಯವರು ಮನೆಮಗನ ಆಗಮನಕ್ಕಾಗಿ ಕಳೆದ ಐದಾರು ದಿನಗಳಿಂದ ಪರಿತಪಿಸುತ್ತಿದ್ದರು.ಇದೀಗ ಮನೆಯಲ್ಲಿ ಸಂತಸ ಹರಡಿದೆ.
PublicNext
01/03/2022 09:22 am