ಮೂಡುಬಿದಿರೆ: ಇಲ್ಲಿನ ಹಿರಿಯ ಸ್ವರ್ಣೋದ್ಯಮಿ, ಶ್ರೀ ಗುರುಮಠ ಕಾಳಿಕಾಂಬಾ ದೇವಸ್ಥಾನದ ಮಾಜಿ ಆಡಳಿತ ಮೊಕ್ತೇಸರ, ಪುತ್ತಿಗೆ ಮನೆ ಗೋಪಾಲ ಆಚಾರ್ಯ (82) ಇಂದು ಅಲ್ಪಕಾಲದ ಅಸೌಖ್ಯದಿಂದ ನಿಧನರಾದರು. ಅವರು ಪತ್ನಿ, ಇಬ್ಬರು ಪುತ್ರರು, ಮೂವರು ಪುತ್ರಿಯರನ್ನು ಅಗಲಿದ್ದಾರೆ.
ಮೂಡುಬಿದಿರೆಯಲ್ಲಿ ಸ್ವರ್ಣ ಕೆಲಸದ ಮೂಲಕ ವೃತ್ತಿ ಜೀವನ ಆರಂಭಿಸಿ, ಕಾರು ಚಾಲಕರಾಗಿ ಬಸ್ಸುಗಳಿಲ್ಲದ ಅಂದಿನ ದಿನಗಳಲ್ಲಿ ಮೂಡುಬಿದಿರೆ- ಮುಂಬೈ ಕಾರು ಚಾಲಕರಾಗಿ ಗುರುತಿಸಿಕೊಂಡಿದ್ದರು. ಬಳಿಕ ಮತ್ತೆ ಸ್ವರ್ಣೋದ್ಯಮಿಯಾಗಿ ಎಂ. ಗಂಗಾಧರ ಆಚಾರ್ಯ ಆ್ಯಂಡ್ ಬ್ರದರ್ಸ್ ಜ್ಯುವೆಲರ್ಸ್, ನಂತರದ ದಿನಗಳಲ್ಲಿ ಕಮಲ್ ಜ್ಯುವೆಲರ್ಸ್ ಸ್ಥಾಪಿಸಿ ಮುನ್ನಡೆಸಿದ್ದರು. ಉತ್ತಮ ಕೃಷಿಕರೂ ಆಗಿದ್ದರು.
ಎರಡು ಬಾರಿ ಮೂಡುಬಿದಿರೆ ಶ್ರೀ ಗುರುಮಠ ಕಾಳಿಕಾಂಬಾ ದೇವಸ್ಥಾನದ ಆಡಳಿತ ಮೊಕ್ತೇಸರರಾಗಿ, ದೇವಳದಲ್ಲಿ ಸಭಾಂಗಣ, ಸಂಪರ್ಕ ರಸ್ತೆ ವಿಸ್ತಾರ, ಗ್ರಾಮ ಕೂಡುವಳಿಕೆಗಳಿಗೆ ಭೇಟಿ ಸೇರಿದಂತೆ ಕ್ಷೇತ್ರದ ಸಮಗ್ರ ಅಭಿವೃದ್ಧಿಗೆ ದುಡಿದಿದ್ದರು. ನಾನಾ ಸಂಘ- ಸಂಸ್ಥೆಗಳಲ್ಲಿಯೂ ಸಕ್ರಿಯರಾಗಿದ್ದರು.
Kshetra Samachara
24/02/2022 09:43 pm