ಮಂಗಳೂರು : ನಗರದ ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಮಹಿಳೆಯೋರ್ವರ ಕಳೆದುಕೊಂಡಿದ್ದ ವಜ್ರದ ಬಳೆಯನ್ನು ಹಿಂದಿರುಗಿಸಿ ಸಿಬ್ಬಂದಿಯೋರ್ವರು ಪ್ರಾಮಾಣಿಕತೆ ಮೆರೆದಿದ್ದಾರೆ.
ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಟ್ರಾಲಿ ರಿಟ್ರೀವರ್ ಸಿಬ್ಬಂದಿ ಅಶ್ರಫ್ ಮೊಯ್ದೀನ್ ವಜ್ರದ ಬಳೆಯನ್ನು ವಾಪಾಸ್ ನೀಡಿ ಪ್ರಾಮಾಣಿಕತೆ ಮೆರೆದವರು. ಮಹಿಳೆಯು ಬೆಂಗಳೂರಿನಿಂದ ಬಂದಿರುವ ಸಂಬಂಧಿಯನ್ನು ಕರೆದೊಯ್ಯಲು ಬಂದಿದ್ದರು. ಈ ವೇಳೆ ಆಕೆ ತಮ್ಮ ಬಳೆ ಕಳೆದುಕೊಂಡಿದ್ದರು. ಆದರೆ ವಿಮಾನ ನಿಲ್ದಾಣದಿಂದ ತೆರಳಿದ ಬಳಿಕ ಬಳೆ ಕಳೆದುಕೊಂಡಿರುವುದು ಅವರ ಗಮನಕ್ಕೆ ಬಂದಿದೆ.
ತಕ್ಷಣ ವಿಮಾನ ನಿಲ್ದಾಣದ ಟರ್ಮಿನಲ್ ಮ್ಯಾನೇಜರ್ ಗೆ ಮಾಹಿತಿ ನೀಡಿ ಬಳೆಯನ್ನು ಪತ್ತೆಹಚ್ಚುವಂತೆ ಕೋರಲಾಗಿತ್ತು. ಆದರೆ ಅದಾಗಲೇ ಟ್ರಾಲಿ ರಿಟ್ರಿವರ್ ಸಿಬ್ಬಂದಿ ಅಶ್ರಫ್ ಮೊಯ್ದೀನ್ ಅವರಿಗೆ ಬಳೆಯು ಟರ್ಮಿನಲ್ ಮಹಡಿಯ ನಿರ್ಗಮನ ಜಾಗದಲ್ಲಿ ಸಿಕ್ಕಿತ್ತು. ತಕ್ಷಣ ಅವರು ಅದನ್ನು ಭದ್ರತಾ ಸಿಬ್ಬಂದಿಗೆ ಹಸ್ತಾಂತರಿಸಿದ್ದರು. ವಿಮಾನ ನಿಲ್ದಾಣದ ಟರ್ಮಿನಲ್ ಮ್ಯಾನೇಜರ್ ಈ ಬಗ್ಗೆ ಭದ್ರತಾ ತಂಡಕ್ಕೆ ಮಾಹಿತಿ ನೀಡುತ್ತಿದ್ದಂತೆ, ಬಳೆ ದೊರಕಿದ್ದು ಖಚಿತವಾಗಿದೆ.
PublicNext
03/02/2022 12:23 pm