ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕಾಪು: 5 ಅಂತಸ್ತಿನ ಗೂಡು ನಿರ್ಮಿಸಿ ಉತ್ತರಕ್ರಿಯೆ; ಡಾ. ಪ್ರಭಾಕರ ಶೆಟ್ಟಿ ಅವರ ಸಂಸ್ಕೃತಿ ಪ್ರೀತಿ ಸ್ಮರಣೆ

ಕಾಪು: ಕಾಪುವಿನ ಹಿರಿಯ ವೈದ್ಯ ಡಾ. ಕೆ. ಪ್ರಭಾಕರ ಶೆಟ್ಟಿ ಅವರ ಉತ್ತರಕ್ರಿಯೆ ಪ್ರಯುಕ್ತ ನಿರ್ಮಿಸಿದ 5 ಅಂತಸ್ತಿನ ಗೂಡು ಜಾನಪದ, ಸಂಸ್ಕೃತಿ ಕಲಾರಾಧಕರ ಮೆಚ್ಚುಗೆಗೆ ಪಾತ್ರವಾಗಿದೆ. ಸಾಮಾನ್ಯವಾಗಿ ಒಂದು ಅಂತಸ್ತಿನ ದೂಪೆ ಅಥವಾ ಗೂಡು ನಿರ್ಮಿಸಲಾಗುತ್ತದೆಯಾದರೂ, ಇಲ್ಲಿ 5 ಅಂತಸ್ತಿನ ಗೂಡು ನಿರ್ಮಿಸಿ ಡಾ. ಪ್ರಭಾಕರ ಶೆಟ್ಟಿ ಅವರಿಗಿದ್ದ ಜಾನಪದ ಮತ್ತು ಸಂಸ್ಕೃತಿ ಪ್ರೀತಿಯನ್ನು ಅವರ ಮನೆಯವರು ಜೀವಂತವಾಗಿರಿಸುವ ಪ್ರಯತ್ನ ಮಾಡಿದ್ದಾರೆ.

ಡಿಸೆಂಬರ್‌ನಲ್ಲಿ ಸ್ವರ್ಗಸ್ಥರಾಗಿದ್ದ ಕಾಪು ಅಯೋಧ್ಯಾ ನಿವಾಸಿ ಸೀತಾ ಆರ್. ಶೆಟ್ಟಿ ಸ್ಮರಣಾರ್ಥ ಅವರ ಮಕ್ಕಳು ಈ ಮಾದರಿಯ 5 ಅಂತಸ್ತಿನ ದೂಪೆ ನಿರ್ಮಿಸಿದ್ದು, ಅದೇ ಮಾದರಿ ದೂಪೆಯನ್ನು ಒಂದೂವರೆ ತಿಂಗಳ ಅಂತರದಲ್ಲಿ ಕಾಪುವಿನಲ್ಲಿ ಮತ್ತೊಮ್ಮೆ ಕಾಣುವಂತಾಗಿದೆ.

ಕೊಪ್ಪಲಂಗಡಿಯ ರಘುರಾಮ ಶೆಟ್ಟಿ ಮಾರ್ಗದರ್ಶನದಲ್ಲಿ ಗಣೇಶ್ ಕುಂದರ್, ಮಾಧವ ಸಾಲಿಯಾನ್, ಸಂದೀಪ್ ಕುಮಾರ್ ಈ ಗೂಡನ್ನು ನಿರ್ಮಿಸಿದ್ದಾರೆ.

Edited By : Nagesh Gaonkar
PublicNext

PublicNext

29/01/2022 10:19 pm

Cinque Terre

51.05 K

Cinque Terre

1

ಸಂಬಂಧಿತ ಸುದ್ದಿ