ಮುಲ್ಕಿ: ಕಳೆದ ದಿನಗಳ ಹಿಂದೆ ಕಿನ್ನಿಗೋಳಿ, ಮುಲ್ಕಿ ಪರಿಸರದಲ್ಲಿ ಮಾನಸಿಕ ಅಸ್ವಸ್ಥನಂತೆ ತಿರುಗಾಡುತ್ತಿದ್ದ ವ್ಯಕ್ತಿಯೊಬ್ಬನನ್ನು ಸ್ಥಳೀಯರು ಆತನನ್ನು ಕಂಡು ವಿಚಾರಿಸಿದಾಗ ಆತ ತನ್ನ ಹೆಸರನ್ನು ಶಂಕರ್ ಯಾನೆ ರಾಜು ಎಂದು ಹೇಳಿದ್ದು ಒಮ್ಮೆ ತಾನು ರಾಜಸ್ಥಾನ ಇನ್ನೊಮ್ಮೆ ಮುಂಬೈ ನಿವಾಸಿ ಎಂದು ಹೇಳಿಕೊಂಡಿದ್ದ ವ್ಯಕ್ತಿಯನ್ನು ಕಂಡು ಭಯಭೀತರಾಗಿ ಪೊಲೀಸರಿಗೆ ಮಾಹಿತಿ ನೀಡಿ ಸ್ಥಳಕ್ಕೆ ಆಗಮಿಸಿದ ಮುಲ್ಕಿ ಠಾಣಾ ಎಎಸ್ಸೈ ಕೃಷ್ಣಪ್ಪ ಕಾರ್ಯಾಚರಣೆ ನಡೆಸಿ ಮಾನಸಿಕ ನಂತೆ ಕಂಡುಬಂದು ಕೂಡಲೇ ಕಾರ್ನಾಡಿನ ಆಪದ್ಬಾಂಧವ ಆಸಿಫ್ ರವರಿಗೆ ಕರೆ ಮಾಡಿ ಆತನನ್ನು ಆಶ್ರಮಕ್ಕೆ ಒಪ್ಪಿಸಿದ್ದರು,
ಆಸಿಫ್ ಆಪತ್ಬಾಂಧವರು ಆತನನ್ನು ಕರೆದುಕೊಂಡು ಹೋಗಿ ಆರೈಕೆ ಮಾಡಿ ವಿಚಾರಿಸಿ ದಾಗ ಆತನ ಫೋನ್ ನಂಬರ್ ಆತನ ಎಡಗೈಯಲ್ಲಿ ಬರೆಯಲಾಗಿತ್ತು.
ಕೂಡಲೇ ಕಾರ್ಯಪ್ರವೃತ್ತರಾದ ಅವರು ಮೊಬೈಲ್ ಮೂಲಕ ಆತನ ಮನೆಯವರನ್ನು ಸಂಪರ್ಕಿಸಿದಾಗ ಮುಂಬೈಯಲ್ಲಿ ಕಲ್ಯಾಣ್ ಉಲ್ಲಾಸನಗರ ನಿವಾಸಿಯೆಂದು ತಿಳಿದುಬಂದಿದ್ದು ಶನಿವಾರ ಸುರಕ್ಷಿತವಾಗಿ ಮುಂಬೈ ಬಸ್ಸಿನಲ್ಲಿ ಕಳುಹಿಸಿ ಕೊಡಲಾಯಿತು.
ಈತನ ಬಗ್ಗೆ ಮಾಹಿತಿ ನೀಡಲು ಸಹಕರಿಸಿದ ಪಬ್ಲಿಕ್ ನೆಕ್ಸ್ಟ್ ಗೆ ಆಪತ್ಬಾಂಧವ ಆಸಿಫ್ ಧನ್ಯವಾದ ಅರ್ಪಿಸಿದ್ದಾರೆ.
Kshetra Samachara
16/01/2022 12:06 pm