ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮಂಗಳೂರು: ಬಸ್ ನಲ್ಲಿ ದೊರೆತ 10 ಸಾವಿರ ರೂ. ಹಣವನ್ನು ಪೊಲೀಸ್ ಕಮಿಷನರ್ ಗೆ ಒಪ್ಪಿಸಿ ಪ್ರಾಮಾಣಿಕತೆ ಮೆರೆದ ಚಾಲಕ - ನಿರ್ವಾಹಕ

ಮಂಗಳೂರು: ಬಸ್ ಸೀಟಿನಲ್ಲಿ ದೊರೆತ ಬರೋಬ್ಬರಿ 10 ಸಾವಿರ ರೂ. ಹಣವನ್ನು ಬಸ್ ಚಾಲಕ ಹಾಗೂ ನಿರ್ವಾಹಕ ಮಂಗಳೂರು ಪೊಲೀಸ್ ಕಮಿಷನರ್ ಗೊಪ್ಪಿಸಿ ಪ್ರಾಮಾಣಿಕತೆ ಮೆರೆದ ಘಟನೆ ಇಂದು ನಡೆದಿದೆ. ಇವರ ಈ ಕಾರ್ಯವನ್ನು ಕಂಡು ಮೆಚ್ಚಿರುವ ಪೊಲೀಸ್ ಕಮಿಷನರ್ ಶಶಿಕುಮಾರ್ ಎನ್. ಅಭಿನಂದನೆ ಸಲ್ಲಿಸಿದ್ದಾರೆ.

ನಗರದ ತಲಪಾಡಿಯಿಂದ ಮಂಗಳೂರಿಗೆ ಹೋಗುವ ಮಹೇಶ್ ಹೆಸರಿನ ಬಸ್ ನಲ್ಲಿ ಈ 10 ಸಾವಿರ ರೂ. ಹಣ ದೊರಕಿತ್ತು. ಹಣವನ್ನು ಬಸ್ ಸೀಟ್ ನಲ್ಲಿ ನೋಡಿದ ಬಸ್ ಚಾಲಕ ದಿನಕರ್ ಮತ್ತು ನಿರ್ವಾಹಕ ಅಲ್ತಾಫ್ ಎಂಬವರು ಪ್ರಾಮಾಣಿಕತೆ ಮೆರೆದು ಪೊಲೀಸ್ ಕಮಿಷನರ್ ಗೆ ಒಪ್ಪಿಸಿದ್ದಾರೆ. ಈ ಹಣ ಯಾರದ್ದೆಂದು ಸೇರಿದ್ದೆಂದು ಇನ್ನೂ ತಿಳಿದು ಬಂದಿಲ್ಲ.

ಬಸ್ ನ ಎಲ್ಲಾ ಪ್ರಯಾಣಿಕರು ಇಳಿದ ಬಳಿಕ ಸೀಟ್ ಮೇಲೆ ಈ 10 ಸಾವಿರ ರೂ. ಹಣವನ್ನು ನಿರ್ವಾಹಕ ನೋಡಿದ್ದಾರೆ. ಬಳಿಕ ಈ ಹಣವನ್ನು ಬಸ್ ನ ನಿರ್ವಾಹಕ ಹಾಗೂ ಚಾಲಕರು ಪೊಲೀಸ್ ಕಮಿಷನರ್ ಗೆ ಒಪ್ಪಿಸಿ ಅವರಿಂದ ಮೆಚ್ಚುಗೆ ಗಳಿಸಿದ್ದಾರೆ. ಈ ಹಣವನ್ನು ಕಳೆದುಕೊಂಡವರು ಸರಿಯಾಗಿ ಪೊಲೀಸರಿಗೆ ಖಾತರಿ ಪಡಿಸಿ ಪಡೆದುಕೊಳ್ಳಬಹುದು ಎಂದು ಪೊಲೀಸ್ ಕಮಿಷನರ್ ಶಶಿಕುಮಾರ್ ಎನ್. ತಿಳಿಸಿದ್ದಾರೆ.

Edited By : Nagesh Gaonkar
Kshetra Samachara

Kshetra Samachara

26/12/2021 07:24 pm

Cinque Terre

7.91 K

Cinque Terre

4

ಸಂಬಂಧಿತ ಸುದ್ದಿ