ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಉಡುಪಿ: ನಾಯಿಗಳಿಂದ ದಾಳಿಗೊಳಗಾದ ಕರುವಿನ ರಕ್ಷಣೆ ,ಆರೈಕೆ

ಉಡುಪಿ: ಅನಾಥ ಕರುವಿನ ಮೇಲೆ ಬೀದಿ ನಾಯಿಗಳು ದಾಳಿ ನಡೆಸಿ ಗಂಭೀರವಾಗಿ ಗಾಯಗೊಳಿಸಿರುವ ಘಟನೆ ಮಣಿಪಾಲ ಶಾಂತಿನಗರದಲ್ಲಿ ನಡೆದಿದೆ.ವಿಷಯ ತಿಳಿದು ಸಮಾಜಸೇವಕ ನಿತ್ಯಾನಂದ ಒಳಕಾಡು ಅವರು ಕರುವನ್ನು ಪಶುವೈದ್ಯಾದಿಕಾರಿ ಡಾ. ಪ್ರಶಾಂತ್ ಶೆಟ್ಟಿ ಅವರಲ್ಲಿ ಚಿಕಿತ್ಸೆಗೆ ಒಳಪಡಿಸಿದರು. ಕರು ಚೇತರಿಕೆ ಕಾಣಲು ಹಲವು ದಿನಗಳು ಬೇಕಾಗಿರುವುದರಿಂದ, ಒಳಕಾಡು ಅವರು ತಮ್ಮ ಮನೆಯಲ್ಲಿಯೇ ಕರುವಿಗೆ ತಾತ್ಕಾಲಿಕ ಆಶ್ರಯ ಒದಗಿಸಿದ್ದಾರೆ. ಸ್ಥಳಿಯ ಚೌಡೇಶ್ವರಿ ಫ್ರೆಂಡ್ಸ್ ಇದರ ಕಾರ್ಯಕರ್ತರು ಆಹಾರ ಭೌಷಧೋಪಚಾರ ನೀಡಿ ಆರೈಕೆ ಮಾಡುತ್ತಿದ್ದಾರೆ. ವಾರಸುದಾರರು ಪತ್ತೆಯಾಗದೆ ಇದ್ದಲ್ಲಿ ಕರುವನ್ನು ಗೋಶಾಲೆಗೆ ದಾಖಲುಪಡಿಸುವುದಾಗಿ ನಿತ್ಯಾನಂದ ಅವರು ಹೇಳಿದ್ದಾರೆ.

Edited By : Manjunath H D
Kshetra Samachara

Kshetra Samachara

18/12/2021 11:40 am

Cinque Terre

18.22 K

Cinque Terre

0

ಸಂಬಂಧಿತ ಸುದ್ದಿ