ಉಡುಪಿ; ಚಿಂತೆ ಇಲ್ಲದವನಿಗೆ ಸಂತೆಯಲ್ಲೂ ನಿದ್ದೆ ಎಂಬಂತೆ ,ಸೂರಿಲ್ಲದ ಈ ಮಹಿಳೆ ತ್ಯಾಜ್ಯದ ರಾಶಿಯಲ್ಲೇ ಆಶ್ರಯ ಪಡೆದಿದ್ದು ನಾಗರೀಕ ಸಮಾಜವೇ ತಲೆ ತಗ್ಗಿಸುವ ಪ್ರಸಂಗ.ಇಂತಹ ಮಹಿಳೆಯನ್ನು ಇವತ್ತು ಪತ್ತೆಹಚ್ಚಿದ್ದು ಸಮಾಜಸೇವಕರು.ಕರ್ವಾಲು ತ್ಯಾಜ್ಯ ಸಂಸ್ಕರಣಾ ಕೇಂದ್ರದಲ್ಲಿ ಈ ಮಹಿಳೆ ಆಶ್ರಯ ಪಡೆದಿರುವ ವಿಷಯ ತಿಳಿದ ಸಮಾಜಸೇವಕರಾದ ನಿತ್ಯಾನಂದ ಒಳಕಾಡು ,ತಾರಾನಾಥ್ ಮೇಸ್ತ ಅಲ್ಲಿಂದ ಅಜ್ಜರಕಾಡು ಜಿಲ್ಲಾಸ್ಪತ್ರೆಗೆ ದಾಖಲಿಸಿದರು.
ಬೇಬಿ ಆಚಾರಿ (55 )ಎಂಬ ಈ ಮಹಿಳೆ ಕಾಂಞಂಗಾಡ್- ಕೇರಳದವಳಾಗಿದ್ದು ,ಕಣ್ಣನ್ ಆಚಾರಿ ಎಂಬವರ ಮಗಳು ಎಂದು ತಿಳಿದುಬಂದಿದೆ.ಈಕೆಯ ಸಂಬಂಧಿಕರು ತುರ್ತಾಗಿ ಉಡುಪಿ ಜಿಲ್ಲಾಸ್ಪತ್ರೆಯನ್ನು ಸಂಪರ್ಕಿಸಲು ಕೋರಲಾಗಿದೆ.
Kshetra Samachara
17/12/2021 10:31 pm