ವಿಶೇಷ ವರದಿ: ರಹೀಂ ಉಜಿರೆ
ಸಾಲಿಕೇರಿ ; ಆ ಊರು ಕರಾವಳಿಯಲ್ಲೇ ಕೈಮಗ್ಗ ನೇಕಾರಿಕೆಗೆ ಪ್ರಸಿದ್ಧಿ ಪಡೆದಿತ್ತು. ಯಾಕಂದರೆ ಊರಿನ ಪ್ರತಿ ಮನೆಯಲ್ಲೂ ಕೈ ಮಗ್ಗದ ಉಡುಪುಗಳು ತಯಾರಾಗುತ್ತಿದ್ದವು.ಆದರೆ ಬದಲಾದ ಕಾಲಘಟ್ಟದಲ್ಲಿ ಒಂದು ಮನೆಯಲ್ಲಿ ಮಾತ್ರ ನೇಕಾರಿಕೆ ಉಳಿದುಕೊಂಡಿದೆ! ಇದೇ ಮನೆಯಿಂದ ಉಡುಪಿ ಕೃಷ್ಣಮಠಕ್ಕೆ ಪಾಣಿ ಪಂಚೆ ಪೂರೈಕೆ ಆಗುತ್ತಿದೆ.
ಉಡುಪಿ ಜಿಲ್ಲೆಯ ಬ್ರಹ್ಮಾವರ ತಾಲೂಕಿನ ಸಾಲೀಕೆರಿ ಗ್ರಾಮದ ಪ್ರತಿ ಮನೆಯಲ್ಲೂ ಕೈ ಮಗ್ಗ ನೇಕಾರಿಕೆ ಇತ್ತು. 150ಕ್ಕೂ ಹೆಚ್ಚು ಮಂದಿ ನೇಕಾರರು ಕೈ ಮಗ್ಗದ ವಿವಿಧ ಉಡುಪುಗಳನ್ನು ತಯಾರು ಮಾಡ್ತಾ ಇದ್ರು. ಆದ್ರೆ ಬದಲಾದ ಕಾಲಘಟ್ಟದಲ್ಲಿ ಮಾರುಕಟ್ಟೆಯಲ್ಲಿ ಆಧುನಿಕ ಟ್ರೆಂಡ್ ಬಟ್ಟೆಗಳ ಜೊತೆ ಸ್ಪರ್ಧಿಸಲಾಗದೆ ಈಗ ಸಾಲಿಕೇರಿಯ ಸರಸ್ವತಿ ಅಜ್ಜಿ ಮನೆಯಲ್ಲಿ ಮಾತ್ರ ಕೈ ಮಗ್ಗ ನೇಕಾರಿಕೆ ನಡೆಯುತ್ತಿದೆ. 75 ವರ್ಷಗಳಿಂದ ಸರಸ್ವತಿ ಅಜ್ಜಿ ನೇಕಾರಿಕೆಯಲ್ಲಿ ತೊಡಗಿಸಿಕೊಂಡಿದ್ದಾರೆ.
ಸರಸ್ವತಿ ಅವರ ಮನೆಯಲ್ಲಿ ಪಾಣಿ ಪಂಚೆಯನ್ನೇ ಈಗ ಹೆಚ್ಚಾಗಿ ತಯಾರು ಮಾಡುತ್ತಿದ್ದಾರೆ. ವಿಶೇಷ ಅಂದ್ರೆ ಉಡುಪಿ ಕೃಷ್ಣಮಠ ಸೇರಿದಂತೆ ಎಲ್ಲಾ ದೇವಸ್ಥಾನಗಳಿಗೂ ಇಲ್ಲಿಂದಲೇ ಪಾಣಿಪಂಚೆ ಪೂರೈಕೆ ಆಗ್ತಾ ಇದೆ.ಆದ್ರೆ ಸದ್ಯ ಕೈಮಗ್ಗ ಕ್ಕೆ ಬೇಕಾಗುವ ಕಚ್ಚಾ ವಸ್ತುಗಳ ಬೆಲೆ ಹೆಚ್ಚಾಗಿದೆ. ಹೀಗಾಗಿ ಸರ್ಕಾರ ಕೈ ಮಗ್ಗ ನೇಕಾರರ ನೆರವಿಗೆ ಬರುವಂತೆ ಆಗ್ರಹಿಸಿದ್ದಾರೆ.
ಒಟ್ಟಿನಲ್ಲಿ, ನೇಕಾರಿಕೆಗೆ ಕರಾವಳಿಯಲ್ಲೇ ಪ್ರಸಿದ್ಧ ಪಡೆದ ಸಾಲಿಕೇರಿಯ ಒಂದು ಮನೆಯಲ್ಲಿ ಮಾತ್ರ ನೇಕಾರಿಕೆ ಉಳಿದುಕೊಂಡಿದೆ. ಸರ್ಕಾರ ಅಳಿವಿನಂಚಿನಲ್ಲಿರುವ ಗುಡಿ ಕೈಗಾರಿಕೆಗೆ ನೆರವು ನೀಡಬೇಕಿದೆ.
Kshetra Samachara
17/12/2021 05:34 pm