ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕಾಪು: ಕೊಚ್ಚಿ ಹೋದ ಮನೆ; ನೆಲ ಕಚ್ಚಿದ ಬದುಕು, ನೆರವಿಗೆ ಮೊರೆ

ಕಾಪು: ಉಡುಪಿ ಜಿಲ್ಲೆಯ ಮಣಿಪುರ ಗ್ರಾಮದ ಸುಮತಿ ಮರಕಾಲ್ತಿ ಅವರ ಮನೆ 2020ರ ಸೆಪ್ಟೆಂಬರ್ ನಲ್ಲಿ ಭೀಕರ ಜಲಪ್ರವಾಹಕ್ಕೆ ಕೊಚ್ಚಿ ಹೋಗಿತ್ತು. ಸರಕಾರದ ವಿಶೇಷ ಪ್ಯಾಕೇಜ್ ಪರಿಹಾರ ಕೂಡ ಕೈಗೆಟುಕದೆ ಮನೆಯ ಅಳಿದುಳಿದ ಅದೇ ಅವಶೇಷಗಳೊಳಗೆ ಅವರ ಬದುಕು ಈಗಲೂ ಸಾಗುತ್ತಿದೆ!

ಅಂದು ರಣಭೀಕರ ಪ್ರವಾಹಕ್ಕೆ ಮಣಿಪುರದ ಸುಮತಿ ಮರಕಾಲ್ತಿ ಅವರ ಬಟ್ಟೆಬರೆ, ಅಕ್ಕಿ, ತಲೆದಿಂಬಿನೊಳಗೆ ಇರಿಸಿದ್ದ ಒಂಚೂರು ಚಿನ್ನಾಭರಣ ಮನೆ ಜೊತೆಗೇ ನೀರುಪಾಲಾಗಿತ್ತು. ಆಸರೆ ಕಳೆದುಕೊಂಡ ಅನಾರೋಗ್ಯ ಪೀಡಿದ ಕುಟುಂಬಕ್ಕೆ ಟರ್ಪಾಲು ಹೊದಿಕೆಯ ಮುರುಕಲು ಗುಡಿಸಲಲ್ಲೇ ದಿನಕಳೆಯುವಂತಹ ದಯನೀಯ ಸ್ಥಿತಿ ಬಂದೊದಗಿತು. ಕೂಲಿ ನಾಲಿ ಮಾಡಿ ಬದುಕು ಸವೆಸುತ್ತಿರುವ ಕುಟುಂಬಕ್ಕೆ ದಿಕ್ಕೇ ತೋಚದಂತಾಗಿದೆ.

ಪ್ರಕೃತಿ ವಿಕೋಪದಡಿ ಸರಕಾರದಿಂದ ಘೋಷಿತವಾದ ನೆರವಿನ ಯಾವುದೇ ಕಂತು ಭ್ರಷ್ಟ ವ್ಯವಸ್ಥೆಯಿಂದಾಗಿ ಕೈ ಸೇರದೆ ಮರೀಚಿಕೆಯಾಗಿದೆ. ಈ ಬಗ್ಗೆ ಜನಪ್ರತಿನಿಧಿಗಳು, ಸಹೃದಯ ದಾನಿಗಳು ಈ ಬಡಕುಟುಂಬದತ್ತ ಚಿತ್ತ ಹರಿಸಿ, ಸೂರಿನ ಸಮಸ್ಯೆಯಾದರೂ ನೀಗಿಸಬೇಕೆಂದು ಈ ಅಸಹಾಯಕ ಹಿರಿಯ ಜೀವ ಅಂಗಲಾಚುತ್ತಿದೆ.

Edited By : Shivu K
Kshetra Samachara

Kshetra Samachara

05/12/2021 10:45 am

Cinque Terre

14.95 K

Cinque Terre

0