ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಪುತ್ತೂರು: ಪುನೀತ್ ನೇತ್ರದಾನ ಪ್ರೇರಣೆ; ತನ್ನ ಕಣ್ಣು ಸಹಿತ ಅಂಗಾಂಗ ದಾನಕ್ಕೆ ಮುಂದಾದ ಅಭಿಮಾನಿ

ಪುತ್ತೂರು: ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ತನ್ನ ಅಭಿಮಾನಿಗಳ ಬದುಕಿನಲ್ಲಿಯೂ ಒಂದು ರೀತಿಯ ಪವರ್ ಮತ್ತು ಪ್ರೇರಣೆ, ಸ್ಫೂರ್ತಿಗೆ ಕಾರಣರಾದವರು. ಪುನೀತ್ ಸಾವಿನ ಆಘಾತಕಾರಿ ಸುದ್ದಿ ಅರಗಿಸಿಕೊಳ್ಳದೆ ಆತ್ಮಹತ್ಯೆಗೆ ಶರಣಾದವರ ಜೊತೆಗೆ ಪವರ್ ಸ್ಟಾರ್ ನ ಪವರ್ ಫುಲ್ ನಿರ್ಧಾರಗಳನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಂಡವರೂ ಹಲವರಿದ್ದಾರೆ. ಇಂತಹವರಲ್ಲಿ ದ.ಕ. ಜಿಲ್ಲೆ ಪುತ್ತೂರಿನ ಪ್ರವೀಣ್ ಡಿಸೋಜ ಕೂಡ ಒಬ್ಬರು.

ಬಾಲ ಕಲಾವಿದನಾಗಿ ತೆರೆಗೆ ಬಂದಂದಿನಿಂದ ಪುನೀತ್ ರ ಕಟ್ಟಾ ಅಭಿಮಾನಿಯಾಗಿರುವ ಪ್ರವೀಣ್, ಪುನೀತ್ ರ ಸಮಾಜಸೇವೆ ಜೊತೆಗೆ ಸಾವಿನಲ್ಲೂ ಬಡವರಿಗೆ ಬೆಳಕಾದ ಪುನೀತ್ ಕಾಳಜಿಗೆ ಮಾರು ಹೋಗಿದ್ದಾರೆ. ಪ್ರವೀಣ್ ಸಹ ಸಾವಿನ ಬಳಿಕ ತನ್ನ ಕಣ್ಣನ್ನು ದಾನ ಮಾಡುವ ನಿರ್ಧಾರಕ್ಕೆ ಬಂದಿದ್ದಾರೆ. ಈ ಸಂಬಂಧ ಈಗಾಗಲೇ ಮಂಗಳೂರಿನ ಪ್ರಸಾದ್ ನೇತ್ರಾಲಯದಲ್ಲಿ ಸಂಬಂಧಿತ ದಾಖಲೆಪತ್ರ ರೆಡಿ ಮಾಡಿದ್ದಾರೆ.

ತನ್ನೆರಡು ಕಣ್ಣು ದೃಷ್ಟಿಹೀನರಿಗೆ 'ಹೊಸ ಬೆಳಕು' ನೀಡುತ್ತವೆ ಎಂಬ ಮಾಹಿತಿ‌ ಪಡೆದುಕೊಂಡಿದ್ದಾರೆ. ತನ್ನ ಈ ನಿರ್ಧಾರಕ್ಕೆ ಕುಟುಂಬದ ಎಲ್ಲರ ಸಹಮತವೂ ಇದ್ದು, ಕಣ್ಣಿನ ಜೊತೆಗೆ ಇತರ ಅಂಗಾಂಗ ದಾನಕ್ಕೂ ನಿರ್ಧರಿಸಿದ್ದೇನೆ ಎಂದಿದ್ದಾರೆ.

Edited By : Manjunath H D
Kshetra Samachara

Kshetra Samachara

06/11/2021 10:25 am

Cinque Terre

29.78 K

Cinque Terre

0

ಸಂಬಂಧಿತ ಸುದ್ದಿ