ಮಂಗಳೂರು: ವಿಶ್ವ ಶಾಂತಿ ಹಾಗೂ ಕೋವಿಡ್ ವಾರಿಯರ್ ಗಳಿಗೆ ನಮನ ಸಲ್ಲಿಸಲು ಪುಣೆಯಿಂದ ಕನ್ಯಾಕುಮಾರಿಗೆ ಸೈಕಲ್ ಜಾಥಾ ಮಾಡುತ್ತಿರುವ ಆರು ಮಂದಿ ವಿದ್ಯಾರ್ಥಿಗಳು ಇಂದು ಮಂಗಳೂರು ತಲುಪಿದ್ದಾರೆ.
ಪುಣೆಯಿಂದ ಪ್ರಯಾಣ ಆರಂಭಿಸಿರುವ ಈ ವಿದ್ಯಾರ್ಥಿಗಳು ಈಗಾಗಲೇ ಐದು ದಿನಗಳ ಪ್ರಯಾಣ ಮುಗಿಸಿದ್ದಾರೆ. ನಿತ್ಯವೂ 160 ಕಿ.ಮೀ. ಪ್ರಯಾಣ ಮಾಡುತ್ತಾರೆ. ಮುಂದಿನ ಐದು ದಿನಗಳಲ್ಲಿ ಕನ್ಯಾಕುಮಾರಿಯನ್ನು ತಲುಪಲಿದ್ದಾರೆ.
ಪುಣೆಯ ಎಂಐಟಿ ಎಡಿಟಿ ಯುನಿವರ್ಸಿಟಿ ಹಾಗೂ ಸಿಯುಪಿ ಕಾಲೇಜಿನ ಆರು ವಿದ್ಯಾರ್ಥಿಗಳು ಈ ಸೈಕಲ್ ಯಾತ್ರೆ ಕೈಗೊಂಡಿದ್ದಾರೆ.
ಇವರು ಮುಂದಿನ ಐದು ದಿನಗಳಲ್ಲಿ ಕನ್ಯಾಕುಮಾರಿಯ ವಿವೇಕಾನಂದ ರಾಕ್ ತಲುಪಲಿದ್ದು, ಅಲ್ಲಿ ತಮ್ಮ ಸೈಕಲ್ ಜಾಥಾ ಅಂತ್ಯಗೊಳಿಸಲಿದ್ದಾರೆ. ಕೋವಿಡ್ ಲಾಕ್ ಡೌನ್ ನಲ್ಲಿ ಜಿಮ್ ಗಳು ಸ್ಥಗಿತಗೊಂಡ ಸಮಯದಲ್ಲಿ ಸೈಕಲ್ ಅಭ್ಯಾಸದಲ್ಲಿ ತೊಡಗಿದ್ದ ಈ ವಿದ್ಯಾರ್ಥಿಗಳು, ಇದೀಗ ಬಹು ದೂರದ ಸೈಕಲ್ ಜಾಥಾವನ್ನೇ ಕೈಗೊಂಡಿದ್ದೇವೆ ಎಂದು ಹೇಳಿದರು.
Kshetra Samachara
05/11/2021 04:43 pm