ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಉಡುಪಿ: "ಶಿಖರದಿಂದ ಸಾಗರ ಯಾನ" ಸಾಹಸಿ ಯುವತಿಯರ ಕಯಾಕಿಂಗ್‌ ತಂಡ ಮಲ್ಪೆಗೆ ಆಗಮನ

ಮಲ್ಪೆ: ಭಾರತದ ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವ ಅಂಗವಾಗಿ “ಶಿಖರದಿಂದ ಸಾಗರ ಯಾನ" ದಲ್ಲಿ ಭಾಗಿಯಾಗಿರುವ ರಾಜ್ಯದ ಐದು ಮಂದಿ ಯುವತಿಯರು ಮಲ್ಪೆಗೆ ಆಗಮಿಸಿದ್ದಾರೆ.

ಕಾಶ್ಮೀರದಲ್ಲಿ ಕೋಲ್‌ಹೈ (5,425 ಮೀ.) ಶಿಖರವನ್ನು ಯಶಸ್ವಿಯಾಗಿ ಏರಿ, ಅನಂತರ ಲಡಾಖ್‌ನಿಂದ 3,000 ಕಿ.ಮೀ. ಸೈಕಲ್‌ ಯಾನ ಮಾಡುತ್ತಾ ಕಾರವಾರಕ್ಕೆ ಬಂದು, ಕಾರವಾರದಿಂದ ಕರ್ನಾಟಕ ಕರಾವಳಿಯ 300 ಕಿ.ಮೀ. ಸಮುದ್ರದಲ್ಲಿ ಕಯಾಕಿಂಗ್‌ ಯಾನ ಮಾಡುತ್ತ ಮಲ್ಪೆ ಸಮುದ್ರ ತೀರಕ್ಕೆ ಆಗಮಿಸಿದ್ದಾರೆ.

ಮಲ್ಪೆ ಸಮುದ್ರ ತೀರದಲ್ಲಿ ಜಿಲ್ಲಾಡಳಿತದ ಪರವಾಗಿ ಪ್ರಭಾರ ಜಿಲ್ಲಾಧಿ ಕಾರಿಯಾಗಿರುವ ಜಿ.ಪಂ. ಸಿಇಒ ಡಾ.ನವೀನ್‌ ಭಟ್‌ ಸ್ವಾಗತಿಸಿದರು. ಯುವತಿಯರು ಸಾಹಸ ಕ್ರೀಡೆಗಳಲ್ಲಿ ತಮ್ಮನ್ನು ಸಕ್ರಿಯವಾಗಿ ತೊಡಗಿಸುವ ಜತೆಗೆ ರಾಷ್ಟ್ರ, ಅಂತಾರಾಷ್ಟ್ರೀಯ ಮಟ್ಟದಲ್ಲಿ ಉತ್ತಮ ಸಾಧನೆ ಮಾಡುವ ದಿಟ್ಟ ನಿರ್ಧಾರ ಮಾಡಬೇಕು ಎಂದರು.

Edited By : Manjunath H D
Kshetra Samachara

Kshetra Samachara

29/10/2021 11:59 am

Cinque Terre

45.61 K

Cinque Terre

0