ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಉಡುಪಿ: ಲಕ್ಷ್ಮೀನಾರಾಯಣ ನಾಯಕ್ ರ ಕನ್ನಡ ರಾಜ್ಯೋತ್ಸವದ ವಿಶೇಷ ಅಂಚೆ ಚೀಟಿ ಸಂಗ್ರಹ

ಉಡುಪಿ: ಕಲ್ಯಾಣಪುರ ಹಿಂದೂ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಪಾಠ ಕೇಳುವಾಗ ಅಧ್ಯಾಪಕರ ಪ್ರೇರಣೆಯಿಂದ ಮೊದಲ ಬಾರಿಗೆ ಅಂಚೆ ಚೀಟಿ ಸಂಗ್ರಹಕ್ಕೆ ಕೈ ಹಾಕಿದ ಲಕ್ಷ್ಮೀನಾರಾಯಣ ನಾಯಕ್ ಬಳಿಕ ಹಿಂದಿರುಗಿ ನೋಡಲಿಲ್ಲ. ತನ್ನ ಪಾಕೆಟ್ ಮನಿಯನ್ನು ಇದೇ ಹವ್ಯಾಸಕ್ಕಾಗಿ ಮೀಸಲಿಟ್ಟ ಇವರು, ದೇಶದ ಮೂಲೆಮೂಲೆಗಳಿಂದ ಸರಕಾರ ವಿಶೇಷ ಸಂದರ್ಭಗಳಲ್ಲಿ ಹೊರತಂದ ನಾಣ್ಯ, ಅಂಚೆ ಚೀಟಿಗಳನ್ನು ಸಂಗ್ರಹಿಸಿದ್ದಾರೆ.

ಕನ್ನಡ ರಾಜ್ಯೋತ್ಸವ ವಿಶೇಷ ಸಂಗ್ರಹ:

ಕರಾವಳಿ ಕರ್ನಾಟಕದಲ್ಲೇ ಮೊದಲ ಬಾರಿ ಎಂಬಂತೆ ಇವರ ಬಳಿ ಕನ್ನಡ ರಾಜ್ಯೋತ್ಸವಕ್ಕೆ ಸಂಬಂಧಿಸಿದ ವಿಶೇಷ ಸಂಗ್ರಹವಿದೆ. ರಾಜ್ಯ ಸರಕಾರ ವಿವಿಧ ಸಾಧಕರ ಬಗ್ಗೆ, ಪ್ರವಾಸಿ ಸ್ಥಳಗಳ ಬಗ್ಗೆ, ಶ್ರದ್ಧಾಕೇಂದ್ರಗಳು, ರಾಜ್ಯದ ನೆಲ ಜಲ, ಸಂಸ್ಕೃತಿಗೆ ಸಂಬಂಧಿಸಿದ 95 ಅಂಚೆ ಚೀಟಿಗಳ ಪೈಕಿ ಲಕ್ಷ್ಮೀನಾರಾಯಣ ನಾಯಕ್ ಅವರ ಬಳಿ 87 ಅಂಚೆ ಚೀಟಿಗಳ ಬೃಹತ್ ಸಂಗ್ರಹವೇ ಇದೆ.

ಈವರೆಗೆ ಶಾಲಾ ಕಾಲೇಜುಗಳಲ್ಲಿ, ಸಾಹಿತ್ಯ ಸಮ್ಮೇಳನಗಳಲ್ಲಿ ಸುಮಾರು 50ಕ್ಕೂ ಹೆಚ್ಚು ಪ್ರದರ್ಶನಗಳನ್ನು ನೀಡಿರುವ ಇವರು ಯಾವುದೇ ಸಂಭಾವನೆ ಪಡೆಯುವುದಿಲ್ಲ.ಇವತ್ತು ಲಕ್ಷ್ಮೀನಾರಾಯಣ ನಾಯಕ್ ಉಡುಪಿ ಪ್ರೆಸ್ ಕ್ಲಬ್ ನಲ್ಲಿ ತಮ್ಮ ಸಂಗ್ರಹಗಳ ಪ್ರದರ್ಶನ ಮಾಡಿದರು.

Edited By : Manjunath H D
Kshetra Samachara

Kshetra Samachara

27/10/2021 01:10 pm

Cinque Terre

23.17 K

Cinque Terre

0

ಸಂಬಂಧಿತ ಸುದ್ದಿ