ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಉಡುಪಿಯ ಇಬ್ಬರು ಪತ್ರಕರ್ತೆಯರಿಗೆ ಬೀಳ್ಕೊಡುಗೆ ,ಸನ್ಮಾನ

ಉಡುಪಿ: ಕೆಲವು ವರ್ಷಗಳಿಂದ ಉಡುಪಿಯಲ್ಲಿ ಕಾರ್ಯನಿರ್ವಹಿಸಿ ಬೆಂಗಳೂರಿಗೆ ವರ್ಗಾವಣೆಗೊಂಡ ಇಬ್ಬರು ಪತ್ರಕರ್ತೆಯರಿಗೆ ಇಂದು ಪ್ರೆಸ್ ಕ್ಲಬ್ ನಲ್ಲಿ ಬೀಳ್ಕೊಡುಗೆ ಸಮಾರಂಭ ಏರ್ಪಡಿಸಲಾಗಿತ್ತು.ಹೊಸದಿಗಂತದ ವರದಿಗಾರ್ತಿ ನವ್ಯಜ್ಯೋತಿ ನೆಲ್ಲಿಜೆ ಮತ್ತು ಉದಯವಾಣಿಯ ವರದಿಗಾರ್ತಿ ತೃಪ್ತಿ ಕುಮ್ರಗೋಡು ಬೆಂಗಳೂರಿಗೆ ವರ್ಗಾವಣೆಗೊಂಡ ಹಿನ್ನೆಲೆಯಲ್ಲಿ ಈ ಸಮಾರಂಭ ಆಯೋಜಿಸಲಾಗಿತ್ತು.

ಪ್ರೆಸ್ ಕ್ಲಬ್ ನ ಸಹೋದ್ಯೋಗಿ ಮಿತ್ರರು ಇವರಿಬ್ಬರನ್ನು ಆತ್ಮೀಯವಾಗಿ ಬೀಳ್ಕೊಟ್ಟು ಶುಭ ಹಾರೈಸಿದರು.ಸಂಘದ ವತಿಯಿಂದ ಗೌರವಿಸಿ ,ಸ್ಮರಣಿಕೆ ನೀಡಲಾಯಿತು.ಸಂಘದ ಅಧ್ಯಕ್ಷ ರಾಜೇಶ್ ಶೆಟ್ಟಿ ಅಲೆವೂರು ,ಕಾರ್ಯದರ್ಶಿ ನಝೀರ್ ಪೊಲ್ಯ,ಖಜಾಂಜಿ ಉಮೇಶ್ ಮಾರ್ಪಳ್ಳಿ ಮತ್ತು ಸದಸ್ಯರು ಉಪಸ್ಥಿತರಿದ್ದರು.

Edited By : PublicNext Desk
Kshetra Samachara

Kshetra Samachara

18/10/2021 04:05 pm

Cinque Terre

6.93 K

Cinque Terre

1

ಸಂಬಂಧಿತ ಸುದ್ದಿ