ಕೋಟ: ಅವರು ವೃತ್ತಿಯಲ್ಲಿ ಶಿಕ್ಷಕ. ಪ್ರವೃತ್ತಿಯಲ್ಲಿ ಕೃಷಿಕ. ತಾವು ಬೆಳೆದ ಬೆಳೆ, ಕಾಡು ಪ್ರಾಣಿಗಳ ಹಾವಳಿಗೆ ಹಾಳಾಗಿ ಹೋಗುತ್ತಿತ್ತು. ಹಾಗೆಂದು ಪ್ರಾಣಿಗಳಿಗೆ ನೋವು ಕೊಡುವುದು ಅವರಿಗೆ ಇಷ್ಡ ಇಲ್ಲ. ಕಾಡು ಪ್ರಾಣಿಗಳ ಉಪಟಳ ದೂರ ಮಾಡುವುದಕ್ಕೆ ಅವರು ಹೊಸತೊಂದು ಉಪಾಯ ಕಂಡುಕೊಂಡರು...ಏನದು?
ಉಡುಪಿ ಜಿಲ್ಲೆಯ ಗಿಳಿಯಾರು ನಿವಾಸಿ,ಶಿಕ್ಷಕ, ಕೃಷಿ ಕಾಯಕದಲ್ಲಿ ತೊಡಗಿಸಿಕೊಂಡ ಗೋವಿಂದ ರಾವ್ ಕಂಡುಕೊಂಡ ಹೊಸ ಪ್ಲಾನ್ ಇದು. ತೆಂಗಿನ ಮರದ ನಡುವೆ ದಾರ ಕಟ್ಟಿ ಅದಕ್ಕೆ ಪ್ಲಾಸ್ಟಿಕ್ ಡಬ್ಬ ನೇತಾಕಿ, ರಾತ್ರಿ ವೇಳೆ ಎರಡು ಲೈಟ್‌ನ್ನು ಆನ್ ಮಾಡಿ ಅದರ ಒಳಗೆ ಇಡ್ತಾರೆ. ಅದು ಸುತ್ತ ತಿರುಗುತ್ತಾ ಇರುತ್ತದೆ. ಇದರಿಂದ ಪ್ರಾಣಿಗಳು ಲೈಟ್ ಕಂಡು, ಯಾರೋ ಬಂದುಬಿಟ್ರು ಅಂತ ಗದ್ದೆಗೆ ಇಳಿಯುವ ಸಾಹಸ ಮಾಡೋದಿಲ್ವಂತೆ! ಇಷ್ಟೇ ಅಲ್ಲ ...ಇದರ ಜೊತೆಗೆ ಎರಡು ಲೌಡ್ ಸ್ಪೀಕರ್‌ನಲ್ಲಿ ಹುಲಿ, ಆನೆ, ಚಿರತೆ ,ನಾಯಿ... ಹೀಗೆ ವಿವಿಧ ಪ್ರಾಣಿಗಳು ಕೂಗುವ ಶಬ್ದವನ್ನು ಜೋರಾಗಿ ಇಡುತ್ತಾರೆ. ಈ ಶಬ್ದಕ್ಕೆ ಕಾಡು ಪ್ರಾಣಿಗಳು ಇವರ ಗದ್ದೆಗೆ ಕಾಲಿಡಲು ಹೆದರುತ್ತವೆ ಅಂತಾರೆ...
ಇನ್ನು ತಂದೆಯ ಹೊಸ ಉಪಾಯಕ್ಕೆ ಮಗ ಆಯುಷ್ಯನ ಸಾಥ್ ಇದೆ. ತಂದೆಯ ಜೊತೆ ರಾತ್ರಿ ವೇಳೆ ಗದ್ದೆಗೆ ತೆರಳಿ ಲೈಟ್, ಸ್ಪೀಕರ್ ಫಿಕ್ಸ್ ಮಾಡುವುದಕ್ಕೆ ಸಹಾಯ ಮಾಡುತ್ತಾನೆ. ಲೈಟ್, ಸ್ಪೀಕರ್ ಒಮ್ಮೆ ಚಾರ್ಜ್ ಮಾಡಿದರೆ ಸುಮಾರು 8 ಗಂಟೆ ಬರುತ್ತದೆ.
ಒಟ್ಟಿನಲ್ಲಿ ಈ ಪ್ರೌಢ ಶಾಲಾ ಶಿಕ್ಷಕರ ಹೊಸ ಉಪಾಯ ಇಡೀ ಹಳ್ಳಿಯಲ್ಲೇ ಮನೆಮಾತಾಗಿದೆ.
Kshetra Samachara
13/10/2021 11:14 am