ಬೆಳ್ತಂಗಡಿ: ನಾವು ನಾನಾ ಕೆಲಸಗಳಿಗೆ ಉಪಯೋಗಿಸಿ, ಬಳಿಕ ನಿರ್ಲಕ್ಷಿಸಿ ಬಿಸಾಡಿದ ಅದೆಷ್ಟೊ ವಸ್ತುಗಳು ಕೆಲವು ಸಂದರ್ಭಗಳಲ್ಲಿ ಪುನರ್ಬಳಕೆಗೆ ಅನಿವಾರ್ಯವಾಗುವುದುಂಟು. ಮೂಲೆ ಸೇರಿರುವ ಅದೇ ವಸ್ತುವಿನ ಅಗತ್ಯತೆಯನ್ನು ಮನಗಂಡು ಮತ್ತೊಮ್ಮೆ ಆ ಸಾಧನ- ಸಲಕರಣೆಗಾಗಿ ತಡಕಾಡುತ್ತೇವೆ, ಹುಡುಕುತ್ತೇವೆ.
'ಕಸದಿಂದ ರಸ' ಎಂಬಂತೆ ಯಾವುದೇ ವಸ್ತು ಅಪ್ರಯೋಜಕವಲ್ಲ. ಅದನ್ನು ಜಾಣ್ಮೆಯಿಂದ ಉಪಯೋಗಿಸಲು ನಮಗೆಲ್ಲ ಗೊತ್ತಿರಬೇಕಷ್ಟೇ. ಆಗಲೇ ಆ ವಸ್ತು ಕಲೆಯ ನೆಲೆಯಾಗುತ್ತವೆ.ಈ ವೀಡಿಯೊದಲ್ಲಿ ಬೆಳ್ತಂಗಡಿ ತಾಲೂಕಿನ ಕಲ್ಮಂಜ ಗ್ರಾಮದ ಯುವಕ ದಿನೇಶ್ ಎಂಬವರು ಸಾಧಾರಣ ಗೋಣಿಚೀಲದಲ್ಲಿ ಟೋಪಿಯನ್ನು ಹೇಗೆ ಸುಲಭವಾಗಿ ಮಾಡಬಹುದೆಂಬುದ್ದನ್ನು ತೋರಿಸಿಕೊಟ್ಟಿದ್ದಾರೆ.
ಈ ಸುಂದರ, ಗಟ್ಟಿಮುಟ್ಟಾದ ಟೋಪಿಯು ಅಷ್ಟೇ ಮೃದುವಾಗಿದ್ದು, ಕೃಷಿ ಕೂಲಿ ಕಾರ್ಮಿಕರು, ಕಟ್ಟಡ ಕಾರ್ಮಿಕರು ಇನ್ನಿತರರು ಅತಿ ಸರಳವಾಗಿ ಭಾರ ಹೊರಲು ಹೇಳಿ ಮಾಡಿಸಿದಂತಿದೆ.
Kshetra Samachara
03/10/2021 05:01 pm