ಉಡುಪಿ:ಉಡುಪಿಯ ಸಮಾಜ ಸೇವಕ, ಸಾವಿರಾರು ಮಂದಿಯ ಬಾಳನ್ನು ಬೆಳಗಿಸಿದ ಕೊಡುಗೈ ದಾನಿ, ಹನುಮಾನ್ ಸಂಸ್ಥೆಯ ಹರಿಕಾರ ಪಾಂಗಾಳ ರವೀಂದ್ರ ನಾಯಕ್ (99) ಇಂದು ಸಾವನ್ನಪ್ಪಿದ್ದಾರೆ. ವಯೋಸಹಜ ಕಾಯಿಲೆಯಿಂದ ಅವರು ತಮ್ಮ ಸ್ವಗೃಹದಲ್ಲಿ ನಿಧನರಾದರು.
ರವೀಂದ್ರ ನಾಯಕ್ ನಿಧನಕ್ಕೆ ಅನೇಕ ಗಣ್ಯರು ಸಂತಾಪ ಸೂಚಿಸಿದ್ದಾರೆ.ಹನುಮಾನ್ ಸಂಸ್ಥೆಯನ್ನು ಕಟ್ಟಿ ಬೆಳೆಸಿದ ಅವರು ಕರಾವಳಿಯ ಅಭಿವೃದ್ಧಿಯಲ್ಲಿ ವಿಶಿಷ್ಟ ಕೊಡುಗೆ ನೀಡಿದ್ದಾರೆ. ಜನಪರ ಕಾಳಜಿಯ ಮಾನವೀಯತೆಯ ಸಾಕಾರಮೂರ್ತಿ, ಮಹಾ ದಾನಿಯಾಗಿದ್ದ ಇವರು ಸದಾ ಉತ್ಸಾಹದ ಚಿಲುಮೆಯಾಗಿದ್ದು ಸಾಮಾನ್ಯರನ್ನೂ ಅತ್ಯಂತ ಪ್ರೀತಿಯಿಂದ ಕಾಣುತ್ತಿದ್ದ ಉಡುಪಿಯ ರತ್ನ, ಹಿರಿಯ ಚೇತನವನ್ನು ನಾವಿಂದು ಕಳೆದು ಕೊಂಡಿದ್ದೇವೆ. ಅವರ ಆತ್ಮಕ್ಕೆ ಚಿರಶಾಂತಿಯನ್ನು ಕೋರುತ್ತೇನೆ ಎಂದು ಶಾಸಕ ರಘುಪತಿ ಭಟ್ ಸಂತಾಪ ಸೂಚಿಸಿದ್ದಾರೆ.
Kshetra Samachara
02/10/2021 01:53 pm