ಮುಲ್ಕಿ: ಮುಲ್ಕಿ ಸಮೀಪದ ಕಿಲ್ಪಾಡಿ ಕುಬೆವೂರು ಜಾರಂದಾಯ ದೈವಸ್ಥಾನದ ಬಳಿಯಲ್ಲಿ ಕಳೆದ ಹಲವಾರು ವರ್ಷಗಳಿಂದ ಅನಾರೋಗ್ಯದಿಂದ ತೀವ್ರ ಬಡತನದಲ್ಲಿ ಜೀವನ ಸಾಗಿಸುತ್ತಿರುವ ವಿಕಲಚೇತನ ಕುಟುಂಬಗಳಿಗೆ ಜಾಗತಿಕ ಬಂಟರ ಸಂಘದ ವತಿಯಿಂದ ಸಹಾಯಹಸ್ತದ ಭರವಸೆ ನೀಡಲಾಯಿತು.
ಜಾಗತಿಕ ಬಂಟರ ಸಂಘದ ಒಕ್ಕೂಟದ ಅಧ್ಯಕ್ಷರಾದ ಐಕಳ ಹರೀಶ್ ಶೆಟ್ಟಿ ಅವರು ಸ್ಥಳೀಯರಾದ ರಮೇಶ್ ಶೆಟ್ಟಿ ಎಂಬವರ ಮಾಹಿತಿಯ ಮೇರೆಗೆ ಕಿಲ್ಪಾಡಿ ಕುಬೆವೂರು ಜಾರಂದಾಯ ದೇವಸ್ಥಾನದ ಬಳಿ ವಾಸವಾಗಿರುವ ದೊಡ್ಡಣ್ಣ ಶಕುಂತಲಾ ಶೆಟ್ಟಿ ಭೇಟಿ ನೀಡಿದಾಗ ಮನಸ್ಸು ಕರಗುವ ದೃಶ್ಯ ಕಾಣುತ್ತಿತ್ತು. ಮನೆಗೆ ಆಸರೆಯಾಗಬೇಕಾದ ದೊಡ್ಡಣ್ಣ ಶೆಟ್ಟಿ ಕಾರ್ಕಳದಲ್ಲಿ ಕೆಲ ವರ್ಷಗಳ ಹಿಂದೆ ನಡೆದ ಅಪಘಾತದ ಬಳಿಕ ಅನಾರೋಗ್ಯದಿಂದ ಇದ್ದು ಸಂಬಂಧಿಕರ ಮನೆಯಲ್ಲಿ ಜೀವನ ಸಾಗಿಸುತ್ತಿದ್ದಾರೆ.
ಮನೆಯಲ್ಲಿ ಶಕುಂತಲಾ ಶೆಟ್ಟಿ, ಮಾವ ರಾಜೇಶ್ ಶೆಟ್ಟಿ ಹಾಗೂ ಕುಟುಂಬದ ಮೂವರು ವಿಕಲಚೇತನರಾಗಿರುವ ಪುತ್ರಿಯರೊಂದಿಗೆ ತೀವ್ರ ಬಡತನದಲ್ಲಿ ಸಣ್ಣಪುಟ್ಟ ಕೃಷಿ ಮಾಡಿಕೊಂಡು ಜೀವನ ಸಾಗಿಸುತ್ತಿರುವುದು ಕಂಡುಬಂತು. ಮನೆ ಕುಟುಂಬ ನೋಡಿಕೊಳ್ಳುತ್ತಿರುವ ಮಾವ ಅನಾರೋಗ್ಯದಿಂದ ಬಳಲುತ್ತಿದ್ದು ಕುಟುಂಬ ಮತ್ತಷ್ಟು ಸಂಕಷ್ಟಕ್ಕೆ ಈಡು ಮಾಡಿದೆ. ವಿಕಲಚೇತನ ಪುತ್ರಿಯರಿಗೆ ತಾಯಿಯೇ ಆಸರೆಯಾಗಿದ್ದು ತಾಯಿ ಕುಟುಂಬದ ಕಷ್ಟಗಳನ್ನು ಮುಕ್ತವಾಗಿ ಹೇಳುವಾಗ ಮನಸು ಕರಗಿಹೋಯಿತು.
ಈ ಸಂದರ್ಭ ಜಾಗತಿಕ ಬಂಟರ ಸಂಘದ ಒಕ್ಕೂಟದ ಅಧ್ಯಕ್ಷರಾದ ಐಕಳ ಹರೀಶ್ ಶೆಟ್ಟಿ ಮಾತನಾಡಿ ಒಕ್ಕೂಟದಿಂದ ಈಗಾಗಲೇ ಹಲವಾರು ಸಾಮಾಜಿಕ ಧಾರ್ಮಿಕ ಹಾಗೂ ತೀವ್ರ ಬಡತನದಲ್ಲಿರುವ ಕುಟುಂಬಗಳಿಗೆ ಸಹಾಯ ಹಸ್ತ ನೀಡುತ್ತಿದ್ದು ಅದರಂತೆ ಈ ಕುಟುಂಬಕ್ಕೆ ಪ್ರತಿ ತಿಂಗಳು ಸಹಾಯ ಹಸ್ತ ನೀಡಲಾಗುವುದು ಎಂದರು.
ಈ ಸಂದರ್ಭ ಇಂಜಿನಿಯರ್ ಜೀವನ್ ಶೆಟ್ಟಿ ಕಾರ್ನಾಡ್, ಯೋಗಗುರು ಜಯ ಮುದ್ದು ಶೆಟ್ಟಿ, ಸುಂದರ್ ಶೆಟ್ಟಿ ಕುಬೆವೂರು, ಮುರಳಿಧರ ಬಂಡಾರಿ, ನಾರಾಯಣ ರೈ, ಗಣೇಶ್ ಮುದ್ದು ಶೆಟ್ಟಿ ಮತ್ತಿತರರು ಇದ್ದರು. ಬಡ ಕುಟುಂಬಕ್ಕೆ ಸಹಾಯ ಮಾಡಲು ಇಚ್ಛಿಸುವವರು ಈ ಕೆಳಗಿನ ವಿಳಾಸಕ್ಕೆ ಹಣವನ್ನು ಜಮಾ ಮಾಡಬಹುದು ಎಂದು ರಮೇಶ್ ಶೆಟ್ಟಿ ತಿಳಿಸಿದ್ದಾರೆ.
Bank of Baroda
A/c no. 71440100004304
IFC code. BARBOVJMULK
Mrs.shakunthala shetty
Kshetra Samachara
27/09/2021 07:39 pm