ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಶಿಬರೂರು : ಜಾಗತಿಕ ಬಂಟರ ಸಂಘಗಳ ಒಕ್ಕೂಟದ ವತಿಯಿಂದ ಅರ್ಥಿಕವಾಗಿ ಹಿಂದುಳಿದ ಕುಟುಂಬಗಳಿಗೆ ಸಹಾಯ ಹಸ್ತ

ಸುರತ್ಕಲ್ : ಜಾಗತಿಕ ಬಂಟರ ಸಂಘಗಳ ಒಕ್ಕೂಟದ ವತಿಯಿಂದ ಅರ್ಥಿಕವಾಗಿ ಹಿಂದುಳಿದ ಸರಿಯಾದ ಸೂರು ಇಲ್ಲದವರಿಗೆ ಮನೆ ನಿರ್ಮಾಣಕ್ಕೆ ಸಹಾಯ ಹಸ್ತ ನೀಡುತ್ತಿದ್ದು ಸುರತ್ಕಲ್ ಸಮೀಪದ ಶಿಬರೂರು ಪಡುಮನೆ ಪದ್ಮನಾಭ ಶೆಟ್ಟಿ , ಸುಂದರಿ ಶೆಟ್ಟಿಯವರ ಮನೆಗೆ ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಅಧ್ಯಕ್ಷ ಐಕಳ ಹರೀಶ್ ಶೆಟ್ಟಿ ಭೇಟಿ ನೀಡಿ ಪರಿಶೀಲಿಸಿದರು.

ಬಡತನದಿಂದ ಜೀವನ ಸಾಗಿಸುವ ಕುಟುಂಬದ ಎಲ್ಲ ವಿವರ ಪಡೆದು ಮನೆ ತೀರಾ ಅಜೀರ್ಣಾವಸ್ಥೆಯಲ್ಲಿದ್ದು ಜಾಗತಿಕ ಬಂಟರ ಸಂಘದ ವತಿಯಿಂದ ಮನೆ ನಿರ್ಮಾಣಕ್ಕೆ ಸಹಾಯ ನೀಡುವ ಭರವಸೆ ನೀಡಿದರು,

ಬಳಿಕ ಐಕಳ ಹರೀಶ್ ಶೆಟ್ಟಿ ಮಾದ್ಯಮ ದೊಂದಿಗೆ ಮಾತನಾಡಿ ಜಾಗತಿಕ ಬಂಟರ ಸಂಘಗಳ ಒಕ್ಕೂಟದ ವತಿಯಿಂದ ಹತ್ತು ಹಲವು ಸಾಮಾಜಿಕ ಚಟುವಟಿಕೆಗಳನ್ನು ಹಮ್ಮಿಕೊಂಡಿದ್ದು ಸೂರು ಇಲ್ಲದವರಿಗೆ ಸೂರು ನೀಡುವ ಯೋಜನೆ ಪ್ರಮುಖವಾಗಿದ್ದು, ಅಲ್ಲದೆ ವೈದ್ಯಕೀಯ ಚಿಕಿತ್ಸೆ, ಶಿಕ್ಷಣಕ್ಕೆ ಸಹಾಯ ಹಸ್ತ ಮತ್ತಿತರ ಯೋಜನೆಗಳನ್ನು ಹಮ್ಮಿಕೊಳ್ಳಲಾಗಿದೆ ಇದುವರೆಗೆ ಸುಮಾರು 150 ಕ್ಕಿಂತಲೂ ಅದಿಕ ಮನೆ ನಿರ್ಮಾಣಕ್ಕೆ ಸಹಾಯ ನೀಡಿದ್ದು ಇನ್ನೂ ಸುಮಾರು 200 ಕ್ಕೂ ಅಧಿಕ ಮನವಿಗಳು ಬಂದಿದೆ ಮುಂದೆಯೂ ಸಹಾಯ ನೀಡುವ ಯೋಚನೆ ಇದೆ ಎಂದರು

ಈ ಸಂದರ್ಭ ಜೀವನ್ ಶೆಟ್ಟಿ ಮೂಲ್ಕಿ, ಸುರೇಶ್ ಶೆಟ್ಟಿ ಪುಚ್ಚಾಡಿ, ಜಿತೇಂದ್ರ ಶೆಟ್ಟಿ ಶಿಬರೂರು ಉಪಸ್ಥಿತರಿದ್ದರು.

Edited By : Manjunath H D
Kshetra Samachara

Kshetra Samachara

23/09/2021 05:02 pm

Cinque Terre

13.87 K

Cinque Terre

0

ಸಂಬಂಧಿತ ಸುದ್ದಿ