ಬಜಪೆ : ಗುರುಪುರ ಬಿಜೆಪಿ ಮಹಾಶಕ್ತಿ ಕೇಂದ್ರದ ವತಿಯಿಂದ ಪ್ರಧಾನಿ ನರೇಂದ್ರ ಮೋದಿ ಹುಟ್ಟುಹಬ್ಬದ ಪ್ರಯುಕ್ತ ಇಂದು ಗುರುಪುರ ಕೈಕಂಬದಲ್ಲಿರುವ ಏಡ್ಸ್ ಪೀಡಿತ ಮಕ್ಕಳ ಪಾಲನಾ ಕೇಂದ್ರ `ಸ್ನೇಹ ಸದನ'ದಲ್ಲಿ ಮಕ್ಕಳಿಗೆ ಹಣ್ಣುಹಂಪಲು ವಿತರಿಸಲಾಯಿತು.
ಈ ಸಂದರ್ಭದಲ್ಲಿ ಮಹಾಶಕ್ತಿ ಕೇಂದ್ರದ ಅಧ್ಯಕ್ಷ ಸೋಹನ್ ಅತಿಕಾರಿ, `ಸ್ನೇಹ ಸದನ' ಸೈಂಟ್ ಕ್ಯುಮಿಲಸ್ ಕೇರ್ ಹೋಂನ ಫಾದರ್ ಜೋಮಿನ್, ಮಹಾಶಕ್ತಿ ಕೇಂದ್ರದ ಕಾರ್ಯದರ್ಶಿ ರಾಜೇಶ್ ಸುವರ್ಣ ಗುರುಪುರ, ಗುರುಪುರ ಪಂಚಾಯತ್ ಸದಸ್ಯರಾದ ಜಿ ಎಂ ಉದಯ ಭಟ್, ಸಚಿನ್ ಅಡಪ ಮತ್ತು ಬಿಜೆಪಿ ಪ್ರಮುಖರಾದ ಶೋಧನ್ ಆದ್ಯಪಾಡಿ, ಸುಧೀರ್ ಕಾಮತ್, ಮಾಧವ ಕಾಜಿಲ, ಸುಧೀರ್ ನಾಯ್ಕ್ ಕೈಕಂಬ, ಶ್ರೀಕರ ಶೆಟ್ಟಿ ಗುರುಪುರ, ತಮ್ಮಯ್ಯ, ಸೋಮಯ್ಯ ಬೆಳ್ಳೂರು, ಶ್ರೀಧರ ಶೆಟ್ಟಿ, ಕುಮಾರಚಂದ್ರ ಶೆಟ್ಟಿ, ಪ್ರವೀಣ್ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು.
Kshetra Samachara
18/09/2021 06:01 pm