ಮುಲ್ಕಿ: ಮಾನಸಿಕವಾಗಿಸ್ಥವ್ಯಸ್ಥಗೊಂಡ ವ್ಯಕ್ತಿಯೊಬ್ಬರು ಕಳೆದ ಒಂದು ವಾರದಿಂದ ಮುಲ್ಕಿ ನಗರ ಪಂಚಾಯತ್ ವ್ಯಾಪ್ತಿಯ ಕಾರ್ನಾಡು ಬೈಪಾಸ್ ತಂಗುದಾಣದಲ್ಲಿ ವಾಸಿಸುತ್ತಿರುವುದನ್ನು ಗಮನಿಸಿದ ಸ್ಥಳೀಯರು ಆತನನ್ನು ರಕ್ಷಿಸಿ ಆಸ್ಪತ್ರೆಗೆ ದಾಖಲಿಸಿದ್ದಾರೆ.
ರಾಷ್ಟ್ರೀಯ ಹೆದ್ದಾರಿ 66ರ ಕಾರ್ನಾಡು ಬೈಪಾಸ್ ಬಸ್ಸು ನಿಲ್ದಾಣದಲ್ಲಿ ಯಾರೋ ದುಷ್ಕರ್ಮಿಗಳು ಈ ವ್ಯಕ್ತಿಯನ್ನು ತಂದು ಬಿಟ್ಟಿದ್ದಾರೆ ಎಂದು ಸ್ಥಳೀಯರು ತಿಳಿಸಿದ್ದಾರೆ.
ಮಾನಸಿಕ ಆಘಾತಗೊಂಡಿದ್ದ ವ್ಯಕ್ತಿ ಅಲ್ಪಸ್ವಲ್ಪ ಹಿಂದಿ ಮಾತನಾಡುತ್ತಿದ್ದು ವಿಳಾಸ ಕೇಳಿದರೆ ಸರಿಯಾಗಿ ಉತ್ತರ ನೀಡುತ್ತಿಲ್ಲ. ಸದ್ಯ ಮಾನವೀಯತೆ ನೆಲೆಯಲ್ಲಿ ಸ್ಥಳೀಯರು ಅಂಬುಲೆನ್ಸ್ ಮೂಲಕ ಮಂಗಳೂರು ಆಸ್ಪತ್ರೆಗೆ ದಾಖಲಿಸಿದ್ದಾರೆ.
Kshetra Samachara
10/09/2021 03:52 pm