ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೈಂದೂರು : ರತ್ನಾಕರ್ ಹೆಬ್ಬಾರ್ ಆರೋಗ್ಯ ವಿಚಾರಿಸಲು ಯುವ ಉದ್ಯಮಿ ಗೋವಿಂದ ಬಾಬು ಪೂಜಾರಿ ಭೇಟಿ

ವರದಿ :ದಾಮೋದರ ಮೊಗವೀರ ನಾಯಕವಾಡಿ.

ಬೈಂದೂರು : ಇಂದು ಶ್ರೀ ವರಲಕ್ಷ್ಮಿ ಚಾರಿಟೇಬಲ್ ಟ್ರಸ್ಟ್ ಉಪ್ಪುಂದ ಇದರ ಮಾಲೀಕರಾದ ಯುವ ಉದ್ಯಮಿ ಅನ್ನದಾತ. ಆಶ್ರಯದಾತ. ಬಡವರ ಪಾಲಿನ ಆಪದ್ಬಾಂಧವ ಗೋವಿಂದ ಬಾಬು ಪೂಜಾರಿ ಅವರು ಗುಜ್ಜಾಡಿ ಗ್ರಾಮದ ನಾಯಕವಾಡಿ- ಮಂಕಿ ವಯೋವೃದ್ಧರು ಕ್ಯಾನ್ಸರ್ ಪೀಡಿತರು ಮಕ್ಕಳ ಭಾಗ್ಯವು ಇಲ್ಲದ ವ್ರದ್ದ ದಂಪತಿಗಳು ಬಾಡಿಗೆ ಮನೆಯಲ್ಲಿ ವಾಸವಾಗಿರುದ್ದರು .

ಹೌದು ಮನೆ ಇದ್ದು ಇಲ್ಲದಂತೆ ಇರುವ ರತ್ನಾಕರ ಹೆಬ್ಬಾರ್ ದಂಪತಿಗಳು ಇವರ ಕಷ್ಟದ ಪರಿಸ್ಥಿತಿ ನೋಡಿ ಮನೆ ಮಾಲೀಕರು ದೇವರಾಯ ಸೇರುಗಾರ್ ಹಲವು ತಿಂಗಳಿಂದ ಈ ದಂಪತಿಗಳಿಂದ ಬಾಡಿಗೆಯು ಪಡೆಯುತ್ತಿಲ್ಲ. ಎಂದು ರತ್ನಾಕರ ಹೆಬ್ಬಾರ್ ಹೆಂಡತಿ ರಾಣಿ ಗೋವಿಂದ ಬಾಬು ಪೂಜಾರಿ ಯವರ ಎದುರು ಕಣ್ಣೀರು ಹಾಕಿದರು .

ಗೋವಿಂದ ಬಾಬು ಪೂಜಾರಿಯವರು ರತ್ನಾಕರ್ ಹೆಬ್ಬಾರರ ಆರೋಗ್ಯ ವಿಚಾರಿಸಿ ಸ್ಥಳದಲ್ಲಿ ಧನ ಸಹಾಯ ಮಾಡಿ ಮಾನವೀಯತೆ ಮೆರೆದರು.

ಇನ್ನೂ ಮುಂದೆ ಏನಾದರೂ ನನ್ನಿಂದ ಸಹಾಯ ಬೇಕಾದರೆ ಮಾಡುತ್ತೇನೆಂದು ಹೇಳಿದರು .

Edited By : Nagesh Gaonkar
Kshetra Samachara

Kshetra Samachara

08/09/2021 07:54 pm

Cinque Terre

8.44 K

Cinque Terre

0

ಸಂಬಂಧಿತ ಸುದ್ದಿ