ಕುಂದಾಪುರ: ಮೂವರು ಯುವಕರು ಮತ್ತು ಓರ್ವ ಯುವತಿ ದಿನಕ್ಕೆ ನೂರು ಕಿ.ಮೀ.ನಂತೆ ಒಂದೂವರೆ ತಿಂಗಳಲ್ಲಿ ಕೇರಳದಿಂದ ಕಾಶ್ಮೀರ ತಲುಪುವ ಗುರಿಯಿಂದ ಹೊರಟಿದ್ದಾರೆ.ವಾರದ ಬಳಿಕ ಈ ತರುಣರ ತಂಡ ಕುಂದಾಪುರ ತಲುಪಿದ್ದು ,ತಮ್ಮ ಪ್ರಯಾಣದ ಉದ್ದೇಶದ ಬಗ್ಗೆ ಹಂಚಿಕೊಂಡರು.
ಯುವಜನತೆಗೆ ಪ್ರೇರಣೆಯಾಗಲಿ ಎಂಬ ಉದ್ದೇಶದಿಂದ ಈ ಪ್ರಯಾಣ ಆರಂಭಿಸಿದ್ದೇವೆ ಎನ್ನುತ್ತಾರೆ ಈ ಬಿಸಿ ರಕ್ತರ ಯುವಕರ ತಂಡ.ತಂಡದಲ್ಲಿ ಓರ್ವ ಯುವತಿ ಕೂಡ ಇದ್ದಾರೆ. ಕಾಶ್ಮೀರಕ್ಕೆ ಹೋಗಬೇಕೆನ್ನುವುದು ಬಹಳ ದಿನಗಳ ಕನಸು. ಸೈಕಲಲ್ಲೇ ಹೋಗಬೇಕು ಎನ್ನುವ ಆಸೆ ಇತ್ತು. ಇದಕ್ಕಾಗಿ ಮನೆ ಮಂದಿ ಒಪ್ಪಿದ್ದಾರೆ ಅನ್ನೋದೇ ಒಂದು ಖುಷಿ. ಹಾಗಾಗಿ ಎಲ್ಲರ ಹಾರೈಕೆಯಿಂದಿಗೆ ಸಾಧಿಸುವ ಛಲದಿಂದ ನಾವು ಹೊರಟಿದ್ದೇವೆ. ಈವರೆಗೆ ಪ್ರಯಾಣದಲ್ಲಿ ಯಾವುದೇ ಆತಂಕ ಎದುರಾಗಿಲ್ಲ ಎನ್ನುತ್ತಾರೆ.
ನಾನೊಬ್ಬ ಯುವತಿಯಾಗಿ ಇಂತಹ ಸಾಹಾಸಕ್ಕೆ ಕೈ ಹಾಕಿರುವುದು ಇನ್ನಷ್ಟು ಮಂದಿಗೆ ಪ್ರೇರಣೆಯಾಗಲಿ ಎಂಬ ಉದ್ದೇಶದಿಂದ .ನನ್ನ ಜೊತೆ ಈ ಮೂವರು ಯುವಕರೂ ಇರುವುದು ಧೈರ್ಯ ತಂದಿದೆ. ನಿಶ್ಚಿತ ಗುರಿಯನ್ನು ನಿಗದಿಯಂತೆಯೇ ತಲುಪಲಿದ್ದೇವೆ ಎನ್ನುತ್ತಾಳೆ ತಂಡದಲ್ಲಿರುವ ಯುವತಿ ಸಜ್ನಾ
Kshetra Samachara
06/09/2021 11:32 am