ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಉಡುಪಿ: ಬಿ.ಆರ್.ಶೆಟ್ಟಿ ಆಸ್ಪತ್ರೆ ನೌಕರರ ವಜಾ: ಮರುನೇಮಕಕ್ಕೆ ದ.ಸಂ.ಸ ಒತ್ತಾಯ

ಉಡುಪಿ: ಬಿ.ಆರ್.ಶೆಟ್ಟಿ ಆಸ್ಪತ್ರೆಯಲ್ಲಿ 5 ತಿಂಗಳಿಂದ ಸಂಬಳ ಕೊಡದೇ ದುಡಿಸಿಕೊಂಡು ನಂತರ ನೌಕರರನ್ನು ನೌಕರಿಯಿಂದ ವಜಾ ಗೊಳಿಸಿದ ಕ್ರಮವನ್ನು ದಲಿತ ಸಂಘರ್ಷ ಸಮಿತಿ ಅಂಬೇಡ್ಕರ್ ವಾದ ತೀವ್ರವಾಗಿ ಖಂಡಿಸಿದೆ. ಆಸ್ಪತ್ರೆಯ ಆಡಳಿತ ಮಂಡಳಿ ತಕ್ಷಣೆವೇ ವಜಾಗೊಳಿಸಿದ ನೌಕರರನ್ನು ವಾವಾಸು ನೌಕರಿಗೆ ಸೇರಿಸಿಕೊಂಡು ಬಾಕಿ ವೇತನವನ್ನು ಪಾವತಿಸಬೇಕು.ಜಿಲ್ಲಾಧಿಕಾರಿ ಯವರು ಈ ಕೂಡಲೇ ಮಧ್ಯ ಪ್ರವೇಶಿಸಿ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಜಿಲ್ಲಾ ಪ್ರಧಾನ ಸಂಚಾಲಕರಾದ ಸುಂದರ ಮಾಸ್ತರ್ ಒತ್ತಾಯಿಸಿದ್ದಾರೆ.

ಇಂದು ಸಂತ್ರಸ್ತ ನೌಕರರನ್ನು ಸ್ಥಳದಲ್ಲಿ ಭೇಟಿಯಾಗಿ ಧೈರ್ಯ ತುಂಬಿ ಮನವಿ ಸ್ವೀಕರಿಸಿದ ಸುಂದರ ಮಾಸ್ತರ್,ಬಳಿಕ ಜಿಲ್ಲಾಧಿಕಾರಿ ಯವರ ಬಳಿ ಫೋನಿನಲ್ಲಿ ಸಮಾಲೋಚನೆ ನಡೆಸಿ ಸೂಕ್ತ ನ್ಯಾಯ ಒದಗಿಸಲು ಒತ್ತಾಯಿಸಿದರು.

ಈ ಕೂಡಲೇ ವಜಾಗೊಂಡ ಬಿ.ಆರ್‌.ಶೆಟ್ಟಿ ಆಸ್ಪತ್ರೆಯ ನೌಕರರಿಗೆ ಸೂಕ್ತ ನ್ಯಾಯ ಒದಗಿಸಿದೇ ಇದ್ದರೆ ದಲಿತ ಸಂಘರ್ಷ ಸಮಿತಿ ಅಂಬೇಡ್ಕರ್ ವಾದ ತಕ್ಕ ಹೋರಾಟದ ಹಾದಿ ಹಿಡಿದು ಉಗ್ರ ಪ್ರತಿಭಟನೆಗೆ ಇಳಿಯಬೇಕಾದೀತು ಎಂದು ಜಿಲ್ಲಾ ಸಂಘಟನಾ ಸಂಚಾಲಕರಾದ ಶ್ಯಾಮರಾಜ್ ಬಿರ್ತಿ , ಪರಮೇಶ್ವರ ಉಪ್ಪೂರು , ಭಾಸ್ಕರ್ ಮಾಸ್ಟರ್ ಕುಂಜಿಬೆಟ್ಟು , ಮಂಜುನಾಥ ಬಾಳ್ಕುದ್ರು , ಶ್ಯಾಮಸುಂದರ ತೆಕ್ಕಟ್ಟೆ , ಶ್ರೀಧರ , ಅಣ್ಣಪ್ಪ ನಕ್ರೆ , ತಾಲೂಕು ಸಂಚಾಲಕರಾದ ಶಂಕರ್ ದಾಸ್ ಚೆಂಡ್ಕಳ , ವಿಠಲ ಉಚ್ಚಿಲ , ಶ್ರೀನಿವಾಸ ವಡ್ಡರ್ಸೆ , ದೇವು ಹೆಬ್ರಿ , ನಾಗರಾಜ ಕುಂದಾಪುರ , ರಾಘವ ಕುಕುಜೆ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

Edited By : PublicNext Desk
Kshetra Samachara

Kshetra Samachara

26/08/2021 04:31 pm

Cinque Terre

5.38 K

Cinque Terre

0

ಸಂಬಂಧಿತ ಸುದ್ದಿ