ಮುಲ್ಕಿ:ಕಿನ್ನಿಗೋಳಿ ಸಮೀಪದ ಗೋಳಿಜೋರ ಎಂಬ ಗ್ರಾಮೀಣ ಪ್ರದೇಶದ ಪ್ರತಿಭೆ ಲೋಲಾಕ್ಷ ರವರು ಜಾದೂಗಾರರಾಗಿದ್ದು ವಾರ್ಷಿಕೋತ್ಸವ, ಗಣೇಶೋತ್ಸವ ಮತ್ತಿತರ ಸಂದರ್ಭಗಲ್ಲಿ ಜಾದು ಕಾರ್ಯಕ್ರಮವನ್ನು ನಡೆಸುತ್ತಾ ರಾಜ್ಯ ಮಾತ್ರವಲ್ಲದೆ ಹೊರ ರಾಜ್ಯಗಳಲ್ಲಿಯೂ ಹೆಸರು ಗಳಿಸಿದ್ದು ಕೊರೊನಾ ದಿನಗಳಲ್ಲಿ ಸುಮ್ಮನೆ ಕೂರದೆ ತೆಂಗಿನ ಗೆರಟಗೆ ಬೇರೆ ಬೇರೆ ರೂಪ ಕೊಟ್ಟು ಜೀವಕಳೆ ನೀಡಿದ್ದಾರೆ
ಕೊರೊನಾದಿಂದ ಕಳೆದ ಮೂರು ತಿಂಗಳು ಲಾಕ್ ಡೌನ್ ಸಂದರ್ಭ ಜಾದೂ ಕಾರ್ಯಕ್ರಮಗಳಿಗೆ ಹಿನ್ನಡೆ ಕಂಡುಬಂದ ಹಿನ್ನೆಲೆಯಲ್ಲಿ ಮನೆಯಲ್ಲಿ ಸುಮ್ಮನೆ ಕೂರದೆ ವಿವಿಧ ಕಲಾಕೃತಿಗಳನ್ನು ಮಾಡಿ ಗಮನ ಸೆಳೆದಿದ್ದಾರೆ,
ತೆಂಗಿನ ಗೆರಟೆ ಮೂಲಕ ಮೀನು, ಆಮೆ, ದೀಪ, ಚಿಟ್ಟೆ, ಬುಟ್ಟಿ, ಟೀ ಕಪ್, ಸೈಕಲ್, ಸ್ಕೂಟರ್, ಗೂಬೆ ಹೀಗೆ ವಿವಿಧ ರೀತಿಯ ಸುಮಾರು 75 ಕ್ಕೂ ಹೆಚ್ಚು ರೀತಿಯ ಕಲಾಕೃತಿ ಮಾಡಿದ್ದು ಅತ್ಯಂತ ಆಕರ್ಷಣಿಯವಾಗಿ ಕಾಣುತ್ತಿದೆ.
ತೆಂಗಿನ ಗೆರಟೆಯನ್ನು ಬೇಕಾದ ಆಕಾರದಲ್ಲಿ ತುಂಡರಿಸಿ ಬೇಕಾದ ಕಲಾಕೃತಿಯನ್ನು ಮಾಡುತ್ತಿದ್ದು ಪಾಲಿಶ್ ಮಾಡಿ ವಾರ್ನಿಶ್ ಲೇಪಿಸಿ ಕಲಾಕೃತಿ ಇನ್ನಷ್ಟು ಸುಂದರ ಕಾಣುವಂತೆ ನೋಡಿಕೊಳ್ಳಲಾಗಿದೆ.
ಕಾರ್ಯಕ್ರಮವೊಂದರಲ್ಲಿ ಈ ಕಲಾಕೃತಿಗಳನ್ನು ಪ್ರದರ್ಶನಕ್ಕೆ ಇಟ್ಟಿದ್ದು ಇದೀಗ ಸಾಕಷ್ಟು ಬೇಡಿಕೆಗಳು ಬರುತ್ತಿದೆ ಎಂದು
ಪಬ್ಲಿಕ್ ನೆಕ್ಸ್ಟ್ ಮಾಧ್ಯಮಕ್ಕೆ ತಿಳಿಸಿದ್ದಾರೆ.
Kshetra Samachara
25/08/2021 11:12 am