ಕುಂದಾಪುರ: ಸೌದಿ ಜೈಲಿನಿಂದ ಬಿಡುಗಡೆಗೊಂಡು ಹುಟ್ಟೂರಿಗೆ ಮರಳಿದ ಹರೀಶ್ ಬಂಗೇರ ಇಂದು ಹುಟ್ಟೂರಿನಲ್ಲಿ ಬಂಧುಮಿತ್ರರ ಜೊತೆ ದೇವಸ್ಥಾನಕ್ಕೆ ಭೇಟಿ ನೀಡಿದರು.
ಪ್ರಸಿದ್ಧ ಆನೆಗುಡ್ಡೆ ದೇವಸ್ಥಾನಕ್ಕೆ ಭೇಟಿ ಅಲ್ಲಿ ಪೂಜೆ ಸಲ್ಲಿಸಿದರು.ಬಳಿಕ ಪಾದಯಾತ್ರೆಯ ಮೂಲಕ ಹರೀಶ್ ಬಂಗೇರ ಹುಟ್ಟೂರಿಗೆ ತೆರಳಿದರು.
ಸೌದಿ ದೊರೆ ಮತ್ತು ಧರ್ಮದ ಅವಹೇಳನ ಪ್ರಕರಣದಲ್ಲಿ ಜೈಲು ಸೇರಿದ್ದ ಹರೀಶ್ ಬಂಗೇರ,ನಿನ್ನೆಯಷ್ಟೇ ಬೆಂಗಳೂರು ವಿಮಾನ ನಿಲ್ದಾಣಕ್ಕೆ ಬಂದಿಳಿದು ,ರಾತ್ರಿ ಹೊತ್ತು ಹುಟ್ಟೂರು ತಲುಪಿದ್ದರು.
Kshetra Samachara
19/08/2021 01:14 pm