ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಉಡುಪಿ: ಅನಾಥ ಮಹಿಳೆಯ ರಕ್ಷಣೆ : ಮಣಿಪಾಲದ ಹೊಸಬೆಳಕು ಆಶ್ರಮದಲ್ಲಿ ಪುನರ್ವಸತಿ

ಉಡುಪಿ: ತಡರಾತ್ರಿ ನಗರದಲ್ಲಿ ತಿರುಗಾಡುತ್ತಿದ್ದ ಅನಾಥ ಮಹಿಳೆಯನ್ನು ರಕ್ಷಣೆ ಮಾಡಿ ಮಣಿಪಾಲದ ಹೊಸಬೆಳಕು ಆಶ್ರಮಕ್ಕೆ ದಾಖಲು ಮಾಡಲಾಗಿದೆ.ಲಕ್ಷ್ಮೀ ಎಂಬ ಈ ಮಹಿಳೆ ಮೂಲತಃ ಬಾಗಲಕೋಟೆ ಜಿಲ್ಲೆಯವರು ಎಂದು ತಿಳಿದು ಬಂದಿದೆ.ಮಹಿಳೆ ಉಡುಪಿಯ ಬನ್ನಂಜೆಯಲ್ಲಿ ಅಸಹಾಯಕವಾಗಿ ರಾತ್ರಿ ವೇಳೆ ತಿರುಗಾಡುತ್ತಿರುವುದನ್ನು ಗಮನಿಸಿದ ಸಾರ್ವಜನಿಕರು ಹೊಸಬೆಳಕು ಆಶ್ರಮಕ್ಕೆ ಕರೆ ಮಾಡಿದ್ದಾರೆ.

ತಕ್ಷಣ ಸ್ಪಂದಿಸಿದ ಹೊಸ ಬೆಳಕು ಆಶ್ರಮದ ಸಿಬ್ಬಂದಿ ಮಹಿಳೆಯನ್ನು ಆಶ್ರಮಕ್ಕೆ ಕರೆತಂದು ಪುನರ್ವಸತಿ ಕಲ್ಪಿಸಿದ್ದಾರೆ. ಹೊಸಬೆಳಕು ಆಶ್ರಮದ ಸಂಸ್ಥಾಪಕರಾದ ತನುಲಾ ತರುಣ್, ವಿನಯಚಂದ್ರ, ಮಂಜುನಾಥ ಬೈಲೂರು ರಕ್ಷಣಾ ಕಾರ್ಯದಲ್ಲಿ ಭಾಗವಹಿಸಿ ಮಾನವೀಯತೆ ಮೆರೆದಿದ್ದಾರೆ.

Edited By : Manjunath H D
Kshetra Samachara

Kshetra Samachara

18/08/2021 12:53 pm

Cinque Terre

9.07 K

Cinque Terre

0